ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಅಟಲ್ ಸದಸ್ಯತಾ ಪರ್ವ-2024″ ಕಾರ್ಯಾಗಾರ
ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಅಟಲ್ ಸದಸ್ಯತಾ ಪರ್ವ-2024″ ಕಾರ್ಯಾಗಾರವು ಶನಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸದಸ್ಯತ್ವ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ,ಬಂಟ್ವಾಳ ಕ್ಷೇತ್ರದಲ್ಲಿ70 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ.ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಂಡಾಗ ಪಕ್ಷ ಬಲಿಷ್ಠವಾಗಲು ಸಾಧ್ಯವಾಗುತ್ತದೆ.ಜಿ.ಪಂ.,ತಾಪಂ.ಚುನಾವಣೆ ನಮ್ಮ ಮುಂದಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚು,ಹೆಚ್ಚು ಸದಸ್ಯತ್ವವನ್ನು ನೋಂದಾಯಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷೆ,ಬಂಟ್ವಾಳ ಮಂಡಲದ ಸಂಘಟನಾ ಉಸ್ತುವಾರಿ ಪೂಜಾ ಪೈ ಪಕ್ಷದ ಸಂವಿಧಾನದಂತೆ ಪ್ರತಿ ಆರು ವರ್ಷಕ್ಕೊಮ್ಮೆ ಸದಸ್ಯತ್ವ ನೋಂದಣೆಯಾಗುತ್ತಿದ್ದು, ಬಂಟ್ವಾಳ ಮಂಡಲದ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ ಮುನ್ನೂರು ಸದಸ್ಯರನ್ನು ನೋಂದಾಯಿಸಿದಾಗ ಗುರಿ ತಲುಪಲು ಸಾಧ್ಯ ಎಂದರಲ್ಲದೆ ಸದಸ್ಯತ್ವದ ನೋಂದಣೆಯ ಮಾಹಿತಿ ನೀಡಿದರು.
ಜಿಲ್ಲೆಯ ಸದಸ್ಯತನ ಅಭಿಯಾನದ ಸಂಯೋಜಕ ವಿಕಾಸ್ ಪುತ್ತೂರು ಸದಸ್ಯತನ ಅಭಿಯಾನ ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕು ಎಂದರು.
ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ,ಮಂಡಲದ ಕಾರ್ಯದರ್ಶಿ ಜನಾರ್ದನ ಬೊಂಡಾಲ ಮೊದಲಾದವರು ವೇದಿಕೆಯಲ್ಲಿದ್ದರು.
ಇದೇವೇಳೆ ವಿವಿಧ ಮಹಾಶಕ್ತಿ ಮತ್ತು ಶಕ್ತಿಕೇಂದ್ರಕ್ಕೆ ನಿಯೋಜಿಸಲಾದ ಸಂಚಾಲಕರ ಹೆಸರನ್ನು ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಘೋಷಿಸಿದರು.
ಬಿಜೆಪಿ ಬಂಟ್ವಾಳ ಮಂಡಲದ ಇನ್ನೋರ್ವ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ರವೀಶ್ ಶೆಟ್ಟಿ ಕರ್ಕಳ ಕಾರ್ಯಕ್ರಮ ನಿರೂಪಿಸಿದರು.
2 Attachments • Scanned by Gmail