ಶ್ರೀ ಶಾರದಾ ಯುವಕ ಮಂಡಲದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸುವರ್ಣ ಮಹೋತ್ಸವ ಸಂಪನ್ನ
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಶಾರದಾನಗರದ ಶ್ರೀ ಶಾರದಾ ಯುವಕ ಮಂಡಲದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸುವರ್ಣ ಮಹೋತ್ಸವವು ಸಂಪನ್ನಗೊಂಡಿತು.ಸಮಾರೋಪ ಸಮಾರಂಭವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಿದರು.ಬಂಟ್ವಾಳ ನಗರಾಭಿವೃದಿ ಪ್ರಾಧಿಕಾರ ಅಧ್ಯಕ್ಷರಾದ ಬೇಬಿ ಕುಂದರ್ , ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ.ಮಾಜಿ ಅಧ್ಯಕ್ಷ ಕ್ಲಬ್ಸ್ ಯಶವಂತ ದೇರಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.ಮಹಾಬಲ ಕೊಟ್ಟಾರಿ ಸಭಾಧ್ಯಕ್ಷತೆ ವಹಿಸಿದ್ದರು,
ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ, ಶ್ರೀ ಶಾರದಾ ಯುವಕ ಮಂಡಲ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಶಾರದಾ ನಗರ,ಮಾಜಿ ಗ್ರಾ.ಪಂ.ಅಧ್ಯಕ್ಷ ಶೋಭಿತ್ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ನಿವೃತ್ತ ಕಮಾಂಡರ್ ಡಿ.ಚಂದಪ್ಪ ಮೂಲ್ಯ, ಸಜೀಪಮುನ್ನೂರು ಸರಕಾರಿ ಅರೋಗ್ಯ ಕೇಂದ್ರದ ಸಹಾಯಕಿ ಕುಮಾರಿ ಸುಮನಾ ಕ್ರಾಸ್ತ, ಮೋಹನ್ ದಾಸ್ ಕೊಟ್ಟಾರಿ, ಜಗದೀಶ್ ಪೂಜಾರಿ, ಪ್ರಶಾಂತ್ ಜೋಗಿ, ಶೇಖರ ಪಬಂದ,ಪ್ರವೀಣ್ ಸಾಲಿಯಾನ್, ಮಹಾಬಲ ಕೊಟ್ಟಾರಿ, ಸದಾನಂದ ಪೂಜಾರಿ, ಡಾ. ದೇವದಾಸ್ ಕಾಪಿಕಾಡ್,ಶೈಲೇಶ್ ಕುಚಿಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಅದೇ ರೀತಿ 2023-2024 ಸಾಲಿನ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ನಿಕಿತಾ, ಪ್ರಾರ್ಥನಾ, ಸಮೀಕ್ಷಾ, ಹರ್ಷಿತ ಅವರನ್ನು ಅಭಿನಂದಿಸಲಾಯಿತು.
ಸತೀಶ್ ಹೊಸ್ಮಾರ್ ಸ್ವಾಗತಿಸಿದರು. ವಿಜೇಶ್ ಪೂಜಾರಿ ಕುಡರ್ ಲಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಡ್ಲ ಚಾ ಪರ್ಕ ನಾಟಕ ಪ್ರದರ್ಶನಗೊಂಡಿತು..