ಬಂಟ್ವಾಳ ಸಮಾಜ ಸೇ.. ಸ. ಸಂಘಕ್ಕೆ 5.71 ಕೋಟಿ ರೂ. ಲಾಭ : ಸುರೇಶ್ ಕುಲಾಲ್
ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ನಿ.ವು 2023-24ನೇ ಸಾಲಿನಲ್ಲಿ 982.54 ಕೋಟಿ ರೂ. ವ್ಯವಹಾರ ನಡೆಸಿ, 5.71 ಕೋಟಿ ರೂ. ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅವರು ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಬೈಪಾಸ್ ನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಂಘದಲ್ಲಿ 8660 ಸದಸ್ಯರಿದ್ದು, ಸಂಘದಲ್ಲಿ 239.90 ಕೋ.ರೂ.ದುಡಿಯುವ ಬಂಡವಾಳ ಆಗಿದ್ದು,7.87 ಕೋ.ರೂ ಪಾಲು ಬಂಡವಾಳ, 214.26 ಕೋ.ರೂ.ಠೇವಣಾತಿ, 15.68 ಕೋ.ರೂ.ನಿಧಿಗಳು,59.82 ಕೋ.ರೂ.ವಿನಿಯೋಗಗಳು, 192.78 ಕೋ.ರೂ.ಸಾಲ ವಿತರಿಸಲಾಗಿದ್ದು, ಶೇಕಡಾ 95.02 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ.ಆಡಿಟ್ ವರ್ಗಿಕರಣದಲ್ಲಿಯು ‘ಎ’ ತರಗತಿಯನ್ನು ಪಡೆದಿದೆ ಎಂದರು.
ಸಂಘದಲ್ಲಿ 241 ಅಮೂಲ್ಯ ಸ್ವಸಹಾಯ ಗುಂಪುಗಳಿದ್ದು 2207 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದಾರೆ. ಒಟ್ಟು 83,63,062.80 ರೂ.ಉಳಿತಾಯವನ್ನು ಮಾಡಿದ್ದಾರೆ. 2023-24 ನೇ ಸಾಲಿನಲ್ಲಿ ಗುಂಪುಗಳಿಗೆ 1,66,95,000.00 ರೂ. ಸಾಲವನ್ನು ನೀಡಿದ್ದು 1,66,75,687.00 ರೂ. ಮರು ಸಂದಾಯ ಮಾಡಿ ವರ್ಷಾಂತ್ಯಕ್ಕೆ 2,03,34,073.00 ರೂ. ಹೊರಬಾಕಿ ಇರುತ್ತದೆ. ಸಹಕಾರಿಯ ಸಾಮಾನ್ಯ ಕ್ಷೇಮನಿಧಿಯಿಂದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ 3,61,000.00 ರೂ.ವನ್ನು ನೀಡಲಾಗಿದೆ. ದೇವಸ್ಥಾನ, ದೈವಸ್ಥಾನ ಜೀರ್ಣೋದ್ದಾರಕ್ಕಾಗಿ 1,98,000.00 ರೂ. ಸಪ್ತಾಹ ಮತ್ತು ಸಂಘ ಸಂಸ್ಥೆಗಳಿಗೆ 3,94,500.00 ರೂ. ಸಹಾಯಧನವನ್ನು ನೀಡಲಾಗಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯ, 10 ಸಾ.ರೂ. ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ಒಂದು ಲಕ್ಷ ರೂ. ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ನೀಡಲಾಗುತ್ತಿದೆ.ಸಂಘವು ದ.ಕ.ಹಾಗು ಉಡುಪಿ ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಉತ್ತಮವಾದ ಸೇವೆ ನೀಡುತ್ತಿದೆ ಎಂದು ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ತ್ವರಿತ ಸಾಲ ಸೌಲಭ್ಯ:
ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತೀರ್ಮಾನಿಸಿರುತ್ತದೆ. 69 ಖಾಯಂ ಸಿಬ್ಬಂದಿಗಳು ಹಾಗೂ ಠೇವಣಾತಿ ಸಂಗ್ರಾಹಕರಾಗಿ 47 ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿ ಹೊಂದಿದೆ. ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದ್ದು,ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಸೇವೆಯನ್ನು ನೀಡಲು ಆಡಳಿತ ಮಂಡಳಿ ಯೋಜನೆ ಹಾಕಿದೆ. ಸಂಘದ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆಯಲ್ಲದೆ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಸದಸ್ಯರ ಅನೂಕೂಲಕ್ಕಾಗಿ ಸೆಫ್ ಡೆಪಾಸಿಟ್ ಲಾಕರ್,ಆರ್ ಟಿ ಜಿ ಎಸ್,ನೇಷ್ಟ್,ಎಸ್ ಎಂಎಸ್
ಹಾಗೂ ಇ-ಸ್ಟ್ಯಾಂಪ್ ಸೌಲಭ್ಯವನ್ನು ಕೇಂದ್ರ ಕಚೇರಿಯಲ್ಲಿ ಆಳವಡಿಸಲಾಗಿದೆಎಂದು ಅವರು ವಿವರಿಸಿದರು.
2023-24ನೇ ಸಾಲಿನ ಮಹಾಸಭೆ ಸೆ. 1 ರಂದು ಆದಿತ್ಯವಾರ ಬಿ.ಸಿ. ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಉಪಾಧ್ಯಕ್ಷ ಪದ್ಮನಾಭ ವಿಟ್ಲ, ನಿರ್ದೇಶಕರುಗಳಾದ ವಿಶ್ವನಾಥ, ಎಂ.ವಾಮನ ಟೈಲರ್, ಜನಾರ್ದನ ಬೊಂಡಾಲ, ವಿ.ವಿಜಯಕುಮಾರ್, ಅರುಣ್ ಕುಮಾರ್, ರಮೇಶ್ ಸಾಲ್ಯಾನ್, ಸತೀಶ್, ಸುರೇಶ್ ಎನ್, ರಮೇಶ್ ಸಾಲಿಯಾನ್, ನಾಗೇಶ್ ಬಿ.ಜಯಂತಿ, ವಿದ್ಯಾ, ವಿಜಯಲಕ್ಮೀ, ಜಗನ್ನಿವಾಸ ಗೌಡ, ಕೆ.ಗಣೇಶ್ ಸಮಗಾರ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ಉಪಸ್ಥಿತರಿದ್ದರು.