ಕೃಷಿ ಇಲಾಖಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಗ್ರಾಮಾಭಿವೃದ್ದಿ ಯೋಜನೆಯ ಮಣಿಹಳ್ಳ ಕಾರ್ಯ ಕ್ಷೇತ್ರದ ಮಣಿ ಪದ್ಮನಾಭ ಗೌಡ ರವರ ಕೃಷಿ ಜಮೀನಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್( ರಿ) ಇದರ ವತಿಯಿಂದ ಕೃಷಿಕರಿಗೆ ಕೃಷಿ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಜಗನ್ನಿವಾಸ ಗೌಡ ವಹಿಸಿದ್ದರು.ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಂದನ್ ಶೆಣೈಯವರು ಕೃಷಿ ಇಲಾಖೆಯ ಸವಲತ್ತುಗಳು ಹಾಗೂ ಭತ್ತದ ಮಹತ್ವದ ಕುರಿತು ವಿವರಿಸಿದರು.
,ಯಂತ್ರಶ್ರೀ ಮೇಲ್ವಿಚಾರಕರಾದ ಉಮೇಶ್ ರವರು ಪ್ರಾತ್ಯಕ್ಷಿಕೆ ಮೂಲಕ ಕೃಷಿ ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿಗಳಾದ ಉಷಾ ಸ್ವಾಗತಿಸಿ, ರೋಹಿಣಿ ವಂದಿಸಿದರು.ಯೋಜನೆಯ ಕೃಷಿ ಮೇಲ್ವಿಚಾರಕರಾದ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು