ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ – ವಿಶೇಷೋಪನ್ಯಾಸ ಕಾರ್ಯಕ್ರಮ

 ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘ ವತಿಯಿಂದ “ನೇಪಾಳದಲ್ಲಿ ಕರ್ನಾಟಕ” ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಮೂಡಬಿದಿರೆ ಶ್ರೀ ಧವಳಾ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ| ಪುಂಡಿಕಾಯಿ ಗಣಪಯ್ಯ ಭಟ್ ಮಾನವಿಕ ಸಂಘವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಬಳಿಕ  ಅವರು ನೇಪಾಳದ ವಿಶೇಷತೆ, ನೇಪಾಳದ ವಿಸ್ತಾರ, ಕರ್ನಾಟಕ ಹಾಗೂ ನೇಪಾಳ ಪ್ರದೇಶದ ಸಂಪರ್ಕ, ನೇಪಾಳದ ಮೇಲೆ ದಾಳಿ, ರಾಜಕೀಯ ಸಾಂಸ್ಕೃತಿಕ ಸಂಬಂಧ ಮೊದಲಾದ ವಿಷಯಗಳ ಕುರಿತು  ವಿವರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕರದ  ಯತಿರಾಜ್ ಶ್ರೀಮಾನ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಹೊಯ್ಸಳ ಪ್ರಾಂತ ಮಾರ್ಗದರ್ಶನ ಮಂಡಳಿಯ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಮಾನವಿಕ ಸಂಘದ ನಿರ್ದೇಶಕಿ ಆಶಾಲತಾ ಕೆ .,

ವಿಠಲ ಪದವಿಪೂರ್ವ ವಿದ್ಯಾಲಯದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಹರಿ ಶರ್ಮ ಅವರು ಉಪಸ್ಥಿತರಿದ್ದರು. 

 ವಿದ್ಯಾರ್ಥಿಗಳಾದ ಚೈತನ್ಯ ಸ್ವಾಗತಿಸಿ, ಕವನ ವಂದಿಸಿದಳು, ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *