ಕಲ್ಲಡ್ಕ ವಲಯ ಬಂಟರ ಸಂಘದಿಂದ”ಕೆಸರ್ ಡ್ ಒಂಜಿ ದಿನ “
ಬಂಟ್ವಾಳ: ಕಲ್ಲಡ್ಕ ವಲಯ ಬಂಟರ ಸಂಘದ ಆಶ್ರಯದಲ್ಲಿ ಪಾಣೆಮಂಗಳೂರು ಗ್ರಾಮದ ಬೊಂಡಾಲ ಅಂತರ ಗುತ್ತು ಚಾವಡಿಯ ಹತ್ತಿರದ ಗದ್ದೆಯಲ್ಲಿ “ಕೆಸರ್ ಡ್ ಒಂಜಿ ದಿನ ” ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಬೊಂಡಾಲ ಅಂತರ ಗುತ್ತು ಇವರು ಕಾರ್ಯಕ್ರಮ ಉದ್ಘಾಟಿಸಿದರು,.

ಕೆ .ಮಹಾಬಲ ಶೆಟ್ಟಿ ಕಕ್ಕೆಮಜಲು, ಶರತ್ ಶೆಟ್ಟಿ ಕಕ್ಕೆಮಜಲು, ಪ್ರತಿಭಾ ರೈ, ವೇದಿಕೆಯಲ್ಲಿದ್ದರು. ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷ ರಾದ ಕೆ ಪದ್ಮನಾಭ ರೈ ಅವರು ಅಧ್ಯಕ್ಷತೆ ವಹಿಸಿದ್ದರು.
ವಲಯದ ಸದಸ್ಯರಿಗೆ ವಿವಿಧ ಸ್ಪರ್ಧೆಗಳು ನಡೆಸಲಾಯಿತು. ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಟ್ಚಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಜಗನ್ನಾಥ ಚೌಟ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷರಾದ ರಮಾ ಎಸ್ ಭಂಡಾರಿ, ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ, ಉದ್ಯಮಿಗಳಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಸಂತೋಷ್ ಶೆಟ್ಟಿ ಅರೆಬೆಟ್ಟು, ಸಂದೇಶ್ ಶೆಟ್ಟಿ ಅರೆಬೆಟ್ಟು, ಶಶಿಧರ ಮಾರ್ಲ ಬೊಂಡಾಲ, ವಿವಿಧ ವಲಯಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.