ಬಂಟ್ವಾಳ ಟಿ. ಎ .ಪಿ.ಸಿ .ಎಂ .ಎಸ್ .ಲಿ. ಗೆ “ಸಾಧನಾ ಪ್ರಶಸ್ತಿ” ಪ್ರದಾನ
ಬಂಟ್ವಾಳ: ಇಲ್ಲಿನ ಟಿ. ಎ. ಪಿ .ಸಿ. ಎಂ. ಎಸ್.ಲಿ. 2023-2024 ನೇ ಸಾಲಿನಲ್ಲಿ ವ್ಯವಹಾರದಲ್ಲಿ ಮಾಡಿರುವ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ‘ಸಾಧನಾಪ್ರಶಸ್ತಿ’ ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಾಸಭೆಯಲ್ಲಿ “ಸಾಧನಾ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು.

ಟಿ. ಎ .ಪಿ.ಸಿ .ಎಂ .ಎಸ್ .ಲಿ. ನ ಅಧ್ಯಕ್ಷರಾದ ಕೆ ರವೀಂದ್ರ ಕಂಬಳಿ ಮತ್ತುಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಯು. ಧರ್ಮಪಾಲ ಭಂಡಾರಿ ಅವರು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರು,ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.