ಬಂಟ್ವಾಳ: ಇಲ್ಲಿನ ಬೈಪಾಸ್ ರಸ್ತೆಯ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಮಂದಿರ ಟ್ರಸ್ಟಿನ ವತಿಯಿಂದ ಇಲ್ಲಿನ ಭಜನಾ ಮಂದಿರದ ದಶಮಾನೋತ್ಸವ ಪ್ರಯುಕ್ತ ಗುರುವಾರ ರಾತ್ರಿ ಆಕರ್ಷಕ ಭಜನಾ ಸಂಕೀರ್ತನಾ ಮೆರವಣಿಗೆ ಬಂಟ್ವಾಳ ನಗರದಲ್ಲಿ ವೈಭವಪೂರ್ಣವಾಗಿ ನಡೆಯಿತು. ಬಡ್ಡಕಟ್ಟೆ ನಿತ್ಯಾನಂದ ಭಜನಮಂದಿರದಿಂದ ಹೊರಟ ಮೆರವಣಿಗೆಯು ಬೈಪಾಸು ನಿತ್ಯಾನಂದ ನಗರದಲ್ಲಿರುವ ಸದ್ಗುರು ಶ್ರೀ ನಿತ್ಯಾನಂದ ಭಜನಾಮಂದಿರದಲ್ಲಿ ಸಮಾಪನಗೊಂಡಿತು.


ಈ ಮೆರವಣಿಗೆಯಲ್ಲಿ ಮಹಿಳೆಯರ , ಮಕ್ಕಳ ಸೇರಿದಂತೆ ತಾಲೂಕಿನ ಸುಮಾರು 25 ಗಿಂತಲೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದವು. ಈ ವೈಭವಪೂರ್ಣ ಭಜನಾ ಸಂಕೀರ್ತನಾ ಮೆರವಣಿಗೆಯ ಉದ್ದಕ್ಕೂ ಸಾವಿರಾರು ಮಂದಿ ಭಕ್ತರು ಭಾಗವಹಿಸದ್ದರು. ಬೆಂಜನಪದವು ಎಳೆ ಮಕ್ಕಳ ಭಜನಾ ತಂಡಗಳ ಕುಣಿತ ವಿಶೇಷ ಗಮನ ಸೆಳೆಯಿತು. ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಭಂಡಾರಿ, ಸುರೇಶ್ ಕುಲಾಲ್, ಉದಯ ಕುಮಾರ್ ರಾವ್ , ದೇವದಾಸ ಶೆಟ್ಟಿ, ಚೆನ್ನಕೇಶವ ಡಿ.ಆರ್., ಯೋಗೀಶ ಕುಲಾಲ್, ಜಿ.ಆನಂದ, ಜನಾರ್ದನ ಸುವರ್ಣ, ಗುರುದತ್ ನಾಯಕ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂದಿರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ನಡೆಯಲಿದೆ.



