ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಕಾಡಬೆಟ್ಟು ಒಕ್ಕೂಟದ ವತಿಯಿಂದ ಅಟಿದ ಲೇಸ್ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ವಗ್ಗ ವಲಯದ ಕಾಡಬೆಟ್ಟು ಒಕ್ಕೂಟದ ವತಿಯಿಂದ ಅಟಿದ ಲೇಸ್ ಕಾರ್ಯಕ್ರಮ ಕಾಡಬೆಟ್ಟು ವಗ್ಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ದೀಪ ಬೆಳಗಿಸಿ ಚೆನ್ನೆಮನೆ ಆಟ ಆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಾ,ಹಿಂದಿನ ಕಾಲದಲ್ಲಿ ಬಡತನದ ಮೂಲಕ ಸಂತೋಷದಿಂದ ಜೀವನ ಮಾಡುತ್ತಿದ್ದರು, ಆದರೆ ಈಗ ಎಲ್ಲರೂ ಬಡತನದಿಂದ ಹೊರಗಡೆ ಬಂದಿದ್ದಾರೆ ಆದರೆ ಸಂತೋಷದ, ಆರೋಗ್ಯವಂತ ಜೀವನ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳ ಪಡೂರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಅಮೀನ್ ವಹಿಸಿದ್ದರು.
ಆಟಿ ತಿಂಗಳ ಮಹತ್ವದ ಬಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಗ್ಗ ದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಉಪನ್ಯಾಸ ನೀಡಿದರು.
ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾಡಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಜಾನನ ಭಟ್, ಕಾಡಬೆಟ್ಟು ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಕುಮಾರಿ ಯು, ಬಂಟ್ವಾಳ ತಾಲೂಕು ಶೌರ್ಯ ವೀಪತು ನಿರ್ವಹಣಾ ಘಟಕದ ಮಾಸ್ಟರ್ ಪ್ರಕಾಶ್, ಕಾಡಬೆಟ್ಟು ಒಕ್ಕೂಟದ ಮಾಜಿ ಅಧ್ಯಕ್ಷರಾದ ಚಂದಪ್ಪ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು.
ಕಾಡಬೆಟ್ಟು ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರುಗಳು, ಶೌರ್ಯ ವೀಪತು ನಿರ್ವಹಣೆ ಘಟಕ ವಗ್ಗದ ಪ್ರತಿನಿಧಿ ಪ್ರವೀಣ್ ಹಾಗೂ ಸದಸ್ಯರುಗಳು ಹಾಜರಿದ್ದರು.ರೇಖಾ ಪಿ ಪ್ರಾರ್ಥಿಸಿ,, ಲೀಲಾವತಿ ಸ್ವಾಗತಿಸಿದರು, ತಾರನಾಥ ಶೆಟ್ಟಿ ವಂದಿಸಿದರು, ಗಣೇಶ್ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.