ಬಿ.ಸಿ.ರೋಡು: ಪೊಲೀಸ್ ಠಾಣೆ ಸಮೀಪದಲ್ಲೇ ಮಟ್ಕಾ ದಂಧೆ
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ನಗರ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ಪದ್ಮ ಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ವೇಳೆ ಡಿವೈಎಸ್ಪಿ ವಿಜಯ್ ಪ್ರಸಾದ್ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ.
ಈ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾದ ಮಂಜೇಶ್ವರದ ಪಾವೂರು ನಿವಾಸಿ ಸಜೀತ್ ಕೆ., ಮಂಗಳೂರು ಕಪಿತಾನಿಯೋ ಶಾಲಾ ಬಳಿ ನಿವಾಸಿ ವಿಶಾಲ್ ಸಿ. ಉಚ್ಚಿಲ್, ಮಂಜೇಶ್ವರದ ಬಡ್ಡಹಿತ್ತಲು ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಸುನಿಲ್ ಕುಮಾರ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, ಮೊಬೈಲ್ ಪೋನ್ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ರೂ ೭೦,೫೦೫ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.