ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕ ಮಾಲೀಕರ ಸಂಘಕ್ಕೆ ರಾವ್ ಪುನರಾಯ್ಕೆ
ಬಂಟ್ವಾಳ: ತಾಲೂಕು ಟೂರಿಸ್ಟ್ ಕಾರು ಚಾಲಕ ಮಾಲೀಕರ ಸಂಘ (ರಿ) ಅಧ್ಯಕ್ಷರಾಗಿ ರಾಘವೇಂದ್ರ ರಾವ್ ಅವರು ಪುನರಾಯ್ಕೆ ಆಗಿದ್ದಾರೆ.
ಈಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ 2024-25ರ ಒಂದು ವರ್ಷದ ಅವಧಿಗೆ 13 ಜನರಿರುವ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ಎಂ.ಪ್ರಭಾಕರ ದೈವಗುಡ್ಡೆ, ಅಧ್ಯಕ್ಷರಾಗಿ ರಾಘವೇಂದ್ರ ರಾವ್ ಬಿ.ಸಿ.ರೋಡ್ ಅವರನ್ನು ಪುರನಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿನ್ಸೆಂಟ್ ರೋಡ್ರಿಗಸ್ ಕಮಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಯಪ್ಪ ಸಿದ್ಧಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮದಕ, ಕೋಶಾಧಿಕಾರಿಯಾಗಿ ಥೋಮಸ್ ಲೊರೆಟ್ಟೊಪದವು ಅವರನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.