ನೆತ್ತರಕೆರೆ : ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ “ಅಟಿಡೊಂಜಿ ಗಮ್ಮತ್” ಕಾರ್ಯಕ್ರಮ
ಬಂಟ್ವಾಳ:ನೆತ್ತರಕೆರೆ ನೇತ್ರಾವತಿ ಮಾತೃ ಮಂಡಳಿಯ ಅಶ್ರಯದಲ್ಲಿ “ಅಟಿಡೊಂಜಿ ಗಮ್ಮತ್” ಕಾರ್ಯಕ್ರಮವು ನೆತ್ತರಕೆರೆ ವಸಂತಿ ವಿಠಲ ಶೆಟ್ಟಿ ಸಭಾಂಗಣದಲ್ಲಿ ಜರಗಿತು.ಭಾರತ ಮಾತೆಗೆ ದೀಪ ಬೆಳಗಿಸಿ ಭತ್ತ ತುಂಬಿದ ಕಳಸೆಯಲ್ಲಿ ತೆಂಗಿನ ಹೂ ಅರಳಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ರಾಧ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಮಹಿಳಾ ಶಕ್ತಿ ಪ್ರಮುಖ್ ಸೌಮ್ಯ ರಾಣಿ, ಪ್ರೀತಿ ಸುರೇಶ ನೆತ್ತರಕೆರೆ, ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ್,ಅಧ್ಯಕ್ಷೆ ಮಾಲತಿ ಚಂದ್ರಹಾಸ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ ಕುಮಾರ್, ಗೌರವಾಧ್ಯಕ್ಷ ಪಿ. ಸುಬ್ರಮಣ್ಯ ರಾವ್, ಸಂಚಾಲಕ ದಾಮೋದರ ನೆತ್ತರಕೆರೆ, ಮಾಜಿ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ ಮತ್ತಿತರರು ಉಪಸ್ಥಿತರಿದ್ದರು.
ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳು ನಡೆಯಿತು.ಮದ್ಯಾಹ್ನ ಮಾತೃ ಮಂಡಳಿಯ ಸದಸ್ಯೆಯರು ಮನೆಯಲ್ಲಿ ತಯಾರಿಸಿ ತಂದ 45ಕ್ಕೂ ಅಧಿಕ ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳೊಂದಿಗೆ ಸಹಭೋಜನ ನಡೆಯಿತು.