Published On: Tue, Aug 13th, 2024

ಉಡುಪಿ: ಶೋರೂಂ ಕ್ಲಸ್ಟರ್ ಮ್ಯಾನೇಜರ್​​ಗೆ​​ ಚೂರಿಯಿಂದ ಇರಿದ ಸೆಕ್ಯೂರಿಟಿ ಗಾರ್ಡ್, ಇಲ್ಲಿದೆ ವಿಡಿಯೋ

ಉಡುಪಿಯಲ್ಲಿ ಅಮಾನುಷ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಒಬ್ಬರು ಶೋರೂಂ ಕ್ಲಸ್ಟರ್ ಮ್ಯಾನೇಜರ್​​ಗೆ ಚೂರಿಯಿಂದ ಇರಿದಿದ್ದಾರೆ. ಇದೀಗ ಈ ಬಗ್ಗೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಚೂರಿಯಿಂದ ಇರಿದು ಆರೋಪಿ ಅಟ್ಟಾಡಿಸಿಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಉಡುಪಿಯ ಹರ್ಷ ಶೋರೂಂನಲ್ಲಿ ನಡೆದಿದೆ.

ರೋನ್ಸನ್ ಎವರೆಸ್ಟ್ (36) ಇರಿತಕ್ಕೆ ಒಳಗಾದ ವ್ಯಕ್ತಿ. ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿದ್ದ ರೋನ್ಸನ್, ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ ಎಂಬುವವರು, ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್​​​ಗೆ ವಾರ್ನಿಂಗ್ ನೀಡಿದ್ದಾರೆ. ಹೀಗೆ ಮಾಡಿದ್ರೆ ಕೆಲಸದಿಂದ ತೆಗೆದು ಹಾಕುವುದಾಗಿ ರೋನ್ಸನ್ ಪ್ರಸಾದ್​​​ಗೆ ವಾರ್ನ್​​​ ಮಾಡಿದ್ದಾರೆ.

ಇದನ್ನೂ ಓದಿ: ಮೂಡಬಿದರೆ: ಹುಡುಗಿ ಮೆಸೇಜ್​​ಗೆ ಉತ್ತರಿಸಿಲ್ಲ ಎಂದು ತರಗತಿಗೆ ಹೋಗಿ ಕತ್ತರಿಯಿಂದ ಇರಿದ ಆಳ್ವಾಸ್​​​ ಕಾಲೇಜಿನ ವಿದ್ಯಾರ್ಥಿ

ವಿಡಿಯೋ ಇಲ್ಲಿದೆ ನೋಡಿ:

ಮರುದಿನ ಮೀಟಿಂಗ್​​​​ನಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದಾರೆ. ಮೀಟಿಂಗ್​​​ ಮುಗಿದ ನಂತರ ಗ್ರೌಂಡ್ ಫ್ಲೋರ್​​​​ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದಾರೆ. ಆದರೆ ತಕ್ಷಣ ರೋನ್ಸನ್ ಅಲ್ಲಿಂದ ಓಡಿದ ಹೋಗಿದ್ದಾರೆ. ಆದರೆ ಆರೋಪಿ ಪ್ರಸಾದ್​​​ ರೋನ್ಸನ್ ಬೆನ್ನಟ್ಟಿ ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter