ವೇಣೂರು ಆಟಿದೊಂಜಿ ದಿನ ಕಾರ್ಯಕ್ರಮ
ವೇಣೂರು:ದೇವಾಡಿಗರ ಸೇವಾ ವೇದಿಕೆ (ರಿ)ವೇಣೂರು ವಲಯ ಹಾಗೂ ದೇವಾಡಿಗರ ಮಹಿಳಾ ವೇದಿಕೆ ವೇಣೂರುಇವರ ಜಂಟಿ ಆಶ್ರಯದಲ್ಲಿಆಟಿದೊಂಜಿ ದಿನ ಕಾರ್ಯಕ್ರಮ ಆ. ೧೧ರಂದು ಭಾನುವಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ನಿವೃತ ಪ್ರಬಂಧಕ ಶೀನ ದೇವಾಡಿಗ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವೇಣೂರು ದೇವಾಡಿಗರ ಸೇವಾ ವೇದಿಕೆಯ ಗೌರವಾಧ್ಯಕ್ಷ ಸುಂದರ ಎಂ. ದೇವಾಡಿಗ ವಹಿಸಿದ್ದರು.ಬೆಳ್ತಂಗಡಿ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಆಟಿಯ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸುರೇಶ್ ಮೊÊಲಿ ,ಬೆಳ್ತಂಗಡಿ ಆಭಿವೃದ್ಧಿ ಅಧಿಕಾರಿ ಅಶೋಕ್ ದೇವಾಡಿಗ ಕಾಂಜರಕಟ್ಟೆ, ಸುಮತಿ ಪಿ.ಎನ್, ದಯಾನಂದ ದೇವಾಡಿಗ ಹಾಗೂ ದೇವಾಡಿಗರ ಸೇವಾ ವೇದಿಕೆ ಹಾಗೂ ದೇವಾಡಿಗರ ಮಹಿಳಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.