ಯಕ್ಷಗಾನ ಶ್ರೀಮಂತ ಕಲೆ:ಮೇಯರ್ ಸುಧೀರ್ ಶೆಟ್ಟಿ
ಬಂಟ್ವಾಳ: ಪರಿಪೂರ್ಣ ಕಲೆಯಾಗಿ ಗುರುತಿಸಿಕೊಂಡ ಯಕ್ಷಗಾನ ಶ್ರೀಮಂತ ಕಲೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡೆ ಅವರ ಶಿಷ್ಯವೃಂದದಿಂದ ಮಂಗಳೂರು ಉರ್ವ ಸ್ಟೋರ್ ಡಾ| ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಎರಡು ದಿನಗಳ ಕಾಲ ನಡೆದ “ಯಕ್ಷ ಸಿದ್ದಿ ಸಂಭ್ರಮ- ಸಿದ್ದಿ ದಶಯಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಗಾನ, ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕು. ಇಂದಿನ ಯುವಜನತೆಗೂ ಕರಾವಳಿಯ ಸಾಂಸ್ಕೃತಿಕ ಕಲೆಗಳ ಬಗ್ಗೆ ಅರಿವು ಮೂಡಿಬೇಕು. ರಕ್ಷಿತ್ ಶೆಟ್ಟಿ ಪಡ್ರೆ ಅವರು ವಿವಿಧ ಡೆಯ ತಿಷ್ಯವೃಂದವನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿದ್ದು ಸ್ತುತ್ಯರ್ಹ ಎಂದರು.

ಯಕ್ಷಗಾನ ವಿದ್ವಾಂಸ ವಾಸುದೇವ ರಂಗಾ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವುದು ಅಗತ್ಯ. ಯೋಗ್ಯ ಗುರುಗಳಿಂದ ಯಕ್ಷಗಾನ ಅಭ್ಯಸಿಸಿದಾಗ ಉತ್ತಮ ಕಲಾವಿದರು ಮೂಡಿ ಬರಲು ಸಾಧ್ಯ. ರಕ್ಷಿತ್ ಶೆಟ್ಟಿ ಅವರ ಯಕ್ಷಶಿಕ್ಷಣ ಕಾರ್ಯ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಅಭಿನಂದನೀಯವಾಗಿದೆ ಎಂದರು.

.ಪಾಲಿಕೆ ಸದಸ್ಯ ಗಣೇಶ್ ಕುಲಾಲ್, ಕದ್ರಿ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ಎಎಸ್‌ಐ ಸುಧಾಕರ ರಾವ್ ಪಾಟೀಲ್, ಪಡ್ರೆ ಶ್ರೀ ದೂಮಾವತಿ ಚಾವಡಿ ಮನೆ ಗಡಿ ಪ್ರಧಾನರಾದ ಬಾಬು ಭಂಡ್ರಿಯಾಲ್,ಅಂಬಾ ಭವಾನಿ ಭಜನ ಮಂದಿರ ಜಲ್ಲಿಗುಡ್ಡೆ ಇದರ ಗೌರವಾಧ್ಯಕ್ಷ ಹರಿಕೇಶವ ಜಾದವ್, ಹಿರಿಯ ವಕೀಲ ಸದಾಶಿವ ಐತಾಳ್, ಉದ್ಯಮಿ ಅಗರಿ ರಾಘವೇಂದ್ರ ರಾವ್, ಯಕ್ಷಗಾನ ಕಲಾವಿದ , ಯಕ್ಷ ಗುರು ರಕ್ಷಿತ್ ಶೆಟ್ಟಿ ಪಡ್ರೆ ಉಪಸ್ಥಿತರಿದ್ದರು

ಬೆಳಗ್ಗೆ ಚೌಕಿಪೂಜೆ, ಪೂರ್ವರಂಗ ನಡೆಯಿತು. ಉದ್ಘಾಟನೆಯ ಬಳಿಕ ಯಕ್ಷಗಾನ ಪ್ರದರ್ಶನ, ಸಂಜೆ ಸಭಾ ಕಾರ್ಯಕ್ರಮ, ಬಳಿಕ ಯಕ್ಷನವರಸ ವೈಭವ, ವಿನೂತನ ಪ್ರಯೋಗ ಹಿಮ್ಮಿಂಚು ಯಕ್ಷಗಾನ ಆಯೋಜಿಸಲಾಯಿತು. ಈ ವೇಳೆ ಯಕ್ಷಸಾಧಕರನ್ನು ಸಮ್ಮಾನಿಸಿ ಗೌರವಿಸಲಾಯಿತು. ಜಯಕರ ಶೆಟ್ಟಿ ಸ್ವಾಗತಿಸಿದರು. ರಾಧಾಕೃಷ್ಣನಿರೂಪಿಸಿದರು. ದಿವ್ಯಾ ಶೆಟ್ಟಿ ವಂದಿಸಿದರು.