ಸರಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಬಂಟ್ವಾಳ ಇದರ ವಗ್ಗ ವಲಯದ ಜನಜಾಗೃತಿ ವೇದಿಕೆ ವತಿಯಿಂದ ಸರಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಆದಮ್ ವಹಿಸಿದ್ದರು.ಜನಜಾಗೃತಿ ವಲಯ ಅಧ್ಯಕ್ಷರಾದ ಪುರುಷೋತ್ತಮ ಮಜಲು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮಾಭಿವೃದ್ಧಿಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಬಾಲ್ಯದಲ್ಲಿಯೇ ಮಕ್ಕಳು ದುಶ್ಚಟದ ಅರಿವು ಮೂಡಿಸಿ ಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಅಜಿಲಮೊಗರು ಜುಮ್ಮಾ ಮಸೀದಿಯಾ ಧರ್ಮ ಗುರುಗಳಾದ ತ್ವಾಹ ಸಾಹದಿಯವರು ದುಶ್ಚಟದಿಂದ ಆಗುವ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಧನಂಜಯ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದಇಸ್ಮಾಯಿಲ್, ಮಾಜಿ ಸದಸ್ಯರಾದ ಗಿರಿಧರ್ ಮಠದ ಬೆಟ್ಟು,ಒಕ್ಕೂಟದ ಅಧ್ಯಕ್ಷರಾದ ಗಿರೀಶ್, ಉಪಾಧ್ಯಕ್ಷರಾದ ತೇಜಾವತಿ, ಬಜ ಕಾರ್ಯಕ್ಷೇತ್ರದ ಉಪಾಧ್ಯಕ್ಷರಾದ ಶೇಖರ್, ವಲಯದ ಮೇಲ್ವಿಚಾರಕರಾಕಿ ಸವಿತಾ, ಸೇವಾ ಪ್ರತಿನಿಧಿಗಳಾದ , ಮೋಹಿನಿ, ಶುಭ, ವಿ ಎಲ್ ಈ ವೈಶಾಲಿ ಉಪಸ್ಥಿತರಿದ್ದರು.