ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮತ್ತು ಯಮೊಟೊ ಶೊಟೆಕಾನ್ ಕರಾಟೆ ಅಸೋಸಿಯೇಷನ್ ವತಿಯಿಂದ ಕರಾಟೆ ತರಬೇತುದಾರರಿಗೆ ಸನ್ಮಾನ
ಕರಾಟೆ ಎನ್ನುವುದು ನಮ್ಮ ರಕ್ಷಣೆಗೆ ಮಾತ್ರವಲ್ಲ, ಸಾಧನೆಗೂ ಪೂರಕ ವಾಗಿರುತ್ತದೆ. ಈ ಸಾಧನೆಯನ್ನು ಮಾಡಲು ಒಬ್ಬ ಗುರು ಇರಲೇಬೇಕು. ಒಬ್ಬ ಉತ್ತಮ ಕರಾಟೆ ಪ್ರತಿಭೆ ಸಾಧನೆ ಮಾಡಬೇಕಾದರೆ ಅವನಿಗೆ ಒಬ್ಬ ತರಬೇತುದಾರ ಕೂಡ ಮುಖ್ಯ. ಇಂತಹ ಕರಾಟೆ ತರಬೇತುದಾರರಿಗೆ ಸನ್ಮಾನವನ್ನು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮತ್ತು ಯಮೊಟೊ ಶೊಟೆಕಾನ್ ಕರಾಟೆ ಅಸೋಸಿಯೇಷನ್ ಮಾಡಿದೆ.
ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮತ್ತು ಯಮೊಟೊ ಶೊಟೆಕಾನ್ ಕರಾಟೆ ಅಸೋಸಿಯೇಷನ್ ವತಿಯಿಂದ ಜಪಾನ್ ಕರಾಟೆ ತರಬೇತುದಾರರನ್ನು ಶನಿವಾರ ಸಂಜೆ ಸನ್ಮಾನಿಸಲಾಯಿತು.
ತರಬೇತುದಾರರಾದ ಶಿಹಾನ್ ನಿಯರ ಮಸಕಿ, ಶಿಹಾನ್ ಇಟೋ ಒರಿಮೊ, ಶಿಹಾನ್ ಕಿತಾಮುರ್ ಕೋಕಿ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಅಸೋಸಿಯೇಷನ್ ಅಧ್ಯಕ್ಷ ಶಾಜು ಮುಲಾವನ್, ಗೌರವಾಧ್ಯಕ್ಷ ರಾಘವೇಂದ್ರ ಭಟ್, ಕಾರ್ಯದರ್ಶಿ ವಿಜಯ ಫೆರ್ನಾಂಡಿಸ್ ಮತ್ತಿತರರು ಇದ್ದರು.