ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಯುವತಿ, ತಂದೆಯ ಬಳಿ ಕ್ಷಮಾಪಣೆ ಕೇಳಿದ ಹಿಂದೂ ಮುಖಂಡ

ಕೇರಳದ ನಟೋರಿಯಸ್ ಕ್ರಿಮಿನಲ್ ವಿರುದ್ದದ ಲವ್ ಜಿಹಾದ್ ಆರೋಪ ಕೇಸ್ ತಿರುವು ಪಡೆದುಕೊಂಡಿದೆ. ಹೌದು, ತಂದೆ-ತಾಯಿ, ಹಿಂದೂ ಸಂಘಟನೆಗಳ ಪ್ರತಿಭಟನೆ ಹೋರಾಟದ ಬಳಿಕವು ತನ್ನ ಇಷ್ಟದಂತೆ ಆತನನ್ನು ಮದುವೆಯಾಗಿದ್ದಾಳೆ. ಹೌದು, ಮನೆ ಬಿಟ್ಟು ಹೋದ ಹಿಂದೂ ಯುವತಿಯು ಕೇರಳದ ಮುಸ್ಲಿಂ ಯುವಕನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ.
ಹೌದು, ಜೂ.6 ರಂದು ಉಳ್ಳಾಲದಿಂದ ವಿಸ್ಮಯಳನ್ನು ಅಶ್ಫಾಕ್ ಕರೆದುಕೊಂಡು ಹೋಗಿದ್ದನು. ಆ ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಲಾಗಿತ್ತು. ಆದರೆ ಜೂನ್ 30 ರಂದು ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು. ಈ ಬಗ್ಗೆ ವಿಸ್ಮಯಳ ತಂದೆ ವಿನೋದ್ ಉಳ್ಳಾಲ ಠಾಣೆಗೆ ಅಪಹರಣ ದೂರು ನೀಡಿದ್ದರು. ಆ ಬಳಿಕ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿ ಯುವತಿಯನ್ನು ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿ ಇರಿಸಿದ್ದರು.

ಆದರೆ ಆಕೆ ಮಾತ್ರ ತಾನು ಆತನ ಜೊತೆಗೆ ಹೋಗುವೆ ಎಂದು ಹಠಹಿಡಿದ್ದಳು. ಈಕೆಯ ತಲೆಯನ್ನು ಕೆಡಿಸಲಾಗಿದೆ ಎಂದು ಆರೋಪಿಸಿ ಅಶ್ಫಾಕ್ ವಿರುದ್ಧ ವಿಸ್ಮಯ ತಂದೆ ದೂರು ನೀಡಿದ್ದರು. ಕೇರಳದಲ್ಲಿ ವಿಸ್ಮಯ ಮತಾಂತರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದರು. ವಿಎಚ್‌ಪಿ ನಾಯಕರು ಯುವತಿಯ ತಂದೆಗೆ ಭರವಸೆ ನೀಡಿದ್ದರು.
ಆದರೆ ಇತ್ತ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದು, ಆಕೆಯನ್ನು ಕರೆತರುವಂತೆ ಆದೇಶ ನೀಡಿತ್ತು. ಅದಲ್ಲದೇ, ಕೇರಳ ಹೈಕೋರ್ಟ್ ಇವರ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಈ ಇಬ್ಬರೂ ಮದುವೆಯಾಗಿದ್ದಾರೆ. ಆದರೆ ಇತ್ತ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ತಂದೆಯ ಬಳಿ ಕ್ಷಮೆ ಕೋರಿದ್ದಾರೆ. ʼಕ್ಷಮಿಸಿ ವಿನೋದ್ ಅವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದಾರೆ.