Published On: Sat, Aug 10th, 2024

ಮರು ಮೌಲ್ಯಮಾಪನ ಶುಲ್ಕ ಮರಳಿಸದಿರಲು ತೀರ್ಮಾನ ಕೈಗೊಂಡ VTU ನಿರ್ಧಾರ ಅತ್ಯಂತ ಖಂಡನೀಯ..

ಅನ್ವಿತ್ ಕಟೀಲ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಎನ್ ಎಸ್ ಯು ಐ ಕರ್ನಾಟಕ

ವಿದ್ಯಾರ್ಥಿಗಳು ಗಳಿಸಿದ ಅಂಕಗಳಲ್ಲಿ ಬದಲಾವಣೆಯಾದರೂ ಇನ್ಮುಂದೆ ಮರು ಮೌಲ್ಯಮಾಪನದ ಶುಲ್ಕ ಮರು ಪಾವತಿ ಮಾಡದಿರಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ನಿರ್ಧರಿಸಿದೆ. ವಿದ್ಯಾರ್ಥಿಗಳ ಪರವಾಗಿ ಈ ನಿರ್ಧಾರವನ್ನು ನಾನು NSUI ನ ಪರವಾಗಿ ಖಂಡಿಸುತ್ತೇನೆ ಹಾಗೂ ತಕ್ಷಣವೇ ಇದನ್ನು ಹಿಂಪಡೆಯಬೇಕು ಎಂದು ಕೋರಿಕೊಳ್ಳುತೇನೆ ಎಂದು ಎನ್‌ ಎಸ್‌ ಯು ಐ ಕರ್ನಾಟಕ ರಾಜ್ಯ ಪ್ರಧನಾ ಕಾರ್ಯದರ್ಶಿ ಅನ್ವೀತ್‌ ಕಟೀಲ್‌ ಹೇಳಿದ್ದಾರೆ.

ವಿದ್ಯಾರ್ಥಿಗಳು ತಾವು ಅಂಕ ಗಳಿಸಿದ್ದರಲ್ಲಿ ಯಾವುದಾದರೂ ಸಮಸ್ಯೆಯಿದ್ದರೆ ಅಥವಾ ತಾವು ಗಳಿಸಿದ ಅಂಕದ ಕುರಿತು ಸಮಾಧಾನ ಅವರಿಗಿಲ್ಲದ್ದಿದ್ದರೆ ಅದರ ಮೇಲೆ ಮರು ಮೌಲ್ಯ ಮಾಪನ ಮಾಡಿಸುವುದು ಎಲ್ಲಾ ವಿದ್ಯಾರ್ಥಿಗಳ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯಾವ ಪಾಪ ಮಾಡಿದ್ದಾರೋ ತಿಳಿಯದು.

ಈಗಾಗಲೇ ವಿದ್ಯಾರ್ಥಿಗಳಿಗೆ ಮರು ಮೌಲ್ಯ ಮಾಪನಕ್ಕೆ ಶುಲ್ಕ ಹೆಚ್ಚಳಗೊಳಿಸಿ ಹೊರೆ ಹೊರಿಸಿರುವ VTU ಈಗ ಶುಲ್ಕವನ್ನು ಹಿಂದಿರುಗಿಸದೆ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು  ವಿದ್ಯಾರ್ಥಿ ಹಿತಕ್ಕೆ ಅತ್ಯಂತ ಮಾರಕವಾಗಿದೆ. ಈ ಮುಂಚೆ ವಿದ್ಯಾರ್ಥಿಗಳಿಗೆ 15 ಅಥವಾ ಅದಕ್ಕಿಂತ ಹೆಚ್ಚಿನ ಅಂಕವನ್ನು ಮರುಮೌಲ್ಯಮಾಪನದಲ್ಲಿ ಪಡೆದುಕೊಂಡರೆ ಅವರ ಶುಲ್ಕವನ್ನು ಹಿಂದಿರುಗಿಸಲಾಗುತ್ತಿತ್ತು. ಆದರೆ ಇದೀಗ ವಿದ್ಯಾರ್ಥಿಗಳೊಂದಿಗೆ ಯಾವುದೇ ಚರ್ಚೆಯನ್ನು ಮಾಡದೆ ಏಕಾಏಕಿ ಈ ನಿರ್ಧಾರವನ್ನು ಕೈಗೊಂಡಿರುವುದು ಅತ್ಯಂತ ದುರದೃಷ್ಟಕರ. ವಿದ್ಯಾರ್ಥಿಗಳ ಪರವಾಗಿ ಈ ನಿರ್ಧಾರವನ್ನು ನಾನು NSUI ನ ಪರವಾಗಿ ಖಂಡಿಸುತ್ತೇನೆ ಹಾಗೂ ತಕ್ಷಣವೇ ಇದನ್ನು ಹಿಂಪಡೆಯಬೇಕು ಎಂದು ಕೋರಿಕೊಳ್ಳುತೇನೆ ಎಂದು ಎನ್‌ ಎಸ್‌ ಯು ಐ ಕರ್ನಾಟಕ ರಾಜ್ಯ ಪ್ರಧನಾ ಕಾರ್ಯದರ್ಶಿ ಅನ್ವೀತ್‌ ಕಟೀಲ್‌ ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter