ಕುಂದಾಪುರ: ಮೀನುಗಾರಿಕೆಗೆ ಹೋದ ವ್ಯಕ್ತಿ ಹೊಳೆಗೆ ಬಿದ್ದು ಸಾವು
![](https://www.suddi9.com/wp-content/uploads/2024/08/denzil_110824_fishindead.jpg)
ಬ್ರಹ್ಮಾವರದ ಸಾಸ್ತಾನ ಕೋಡಿ ಗ್ರಾಮದಲ್ಲಿ ಹೊಳೆಗೆ ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿಯೊಬ್ಬರು ಹೊಳೆಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಸಾಸ್ತಾನದ ಯಕ್ಷಿಮಠ ನಿವಾಸಿ ರಾಜು ಮರಕಾಲ (60) ನೀರಿಗೆ ಬಿದ್ದ ಮೃತಪಟ್ಟ ವ್ಯಕ್ತಿ.
ಇವರು ಹೊಳೆಯಲ್ಲಿ ಕಪ್ಪೆ ಚಿಪ್ಪು (ಮರುವಾಯಿ) ಆಯ್ದು ಪೇಟೆಯಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆ. 8 ರಂದು ಕೂಡಾ ಇವರು ಕಪ್ಪೆ ಚಿಪ್ಪು ಸಂಗ್ರಹಕ್ಕಾಗಿ ಮನೆ ಸಮೀಪದ ಕೋಡಿ ಹೊಳೆಗೆ ತೆರಳಿದ್ದರು. ಹೀಗೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಶನಿವಾರ (ಆ.10) ಬೆಳಗ್ಗೆ ಸ್ಥಳೀಯ ಮೀನಯಗಾರರರು ಅದೇ ನದಿಯಲ್ಲಿ ಈ ವ್ಯಕ್ತಿಯ ಶವ ತೇಲುತ್ತಿರುವುದನ್ನು ಕಂಡು, ಪೊಲೀಸ್ ಠಾಣೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಜೀವನ್‌ಮಿತ್ರ ತಂಡದೊಂದಿಗೆ ದೋಣಿಯಲ್ಲಿ ಕಾರ್ಯಾಚರಣೆ ನಡೆಸಿ ರಾಜು ಅವರ ಮೃತ ದೇಹವನ್ನು ಮೇಲಕ್ಕೆ ತಂದು ಕಾನೂನು ಪ್ರಕ್ರಿಯೆಗಳನ್ನು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.