ಮಂಗಳೂರು: ಬ್ರೆಜಿಲ್ ಹುಡುಗಿಯನ್ನು ವರಿಸಿದ ಮಂಗಳೂರಿನ ಹುಡುಗ, ಇವರ ಪ್ರೀತಿಗೆ 5 ವರ್ಷ

ಪ್ರೀತಿ ಜಾತಿ, ಧರ್ಮ, ದೇಶ ಎಂಬುದಿಲ್ಲ. ಯಾರು ಯಾರನ್ನು ಬೇಕಾದರು ಪ್ರೀತಿ ಮಾಡಬಹುದು. ಆದರೆ ಅದು ಕೆಲವರಿಗೆ ಮಾತ್ರ ದಕ್ಕುವುದು ನಿಜ. ಇದಕ್ಕೆ ಸಾಕ್ಷಿ ಇವರು ನೋಡಿ. ಮಂಗಳೂರಿನ ವ್ಯಕ್ತಿ ಬ್ರೆಜಿಲ್ ಮಹಿಳೆಯನ್ನು ಆ.8ರಂದು ಮದುವೆಯಾಗಿದ್ದಾರೆ. ಮಂಗಳೂರಿನ ಟಿವಿ ರಮಣ್ ಪೈ ಸಭಾಂಗಣದಲ್ಲಿ ಈ ಮದುವೆ ನಡೆದಿದೆ. ಇವರಿಬ್ಬರು ಕೂಡ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರಿನ ಹಾಗೂ ಹಿಂದೂ ಸಂಪ್ರಾದಾಯದಂತೆ ಇಬ್ಬರು ಮದುವೆಯಾಗಿದ್ದಾರೆ. ಇದೀಗ ಈ ಬಗ್ಗೆ ಎಲ್ಲ ಕಡೆ ವೈರಲ್ ಆಗಿದ್ದು, ಈ ಜೋಡಿಯನ್ನು ಹಾರೈಸಿದ್ದಾರೆ. ಮಂಗಳೂರು ಮೂಲದ ರಮಾನಂದ್ ಪೈ ಮತ್ತು ಪ್ರೀತಂ ಪೈ ದಂಪತಿಯ ಪುತ್ರ ಆದಿತ್ಯ ಕಳೆದ ಎಂಟು ವರ್ಷಗಳಿಂದ ಬ್ರೆಜಿಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬ್ರೆಜಿಲ್‌ನ ಸಾವೊ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಟಾಟಿಯಾನೆ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಮೂಡಿದೆ.
ಐಟಿ ಸಂಸ್ಥೆಯೊಂದರಲ್ಲಿ ಸಹೋದ್ಯೋಗಿಗಳಾಗಿರುವ ಈ ಜೋಡಿ 2019ರಿಂದ ಪ್ರೀತಿ ಮಾಡುತ್ತಿದ್ದಾರೆ. ಟಟಿಯಾನೆ ಅವರು ಬ್ರೆಜಿಲ್‌ನ ಮಾರಿಯಾ ಲೂಸಿಯಾ ಮತ್ತು ಅಟಿಲಿಯೊ ಟೊಮಾಜಿಯ ಹಿರಿಯ ಪುತ್ರಿ. ಇಬ್ಬರು ಕೂಡ ಮದುವೆಗಾಗಿ ಮಂಗಳೂರಿಗೆ ಬಂದಿದ್ದಾರೆ, ಇವರ ಜತೆಗೆ ಟಟಿಯಾನೆ ಸಹೋದರಿಯರಾದ ಥೈಸ್ ಮತ್ತು ಥಲಿತಾ ಅವರು ಕೂಡ ಮಂಗಳೂರಿಗೆ ಬಂದಿದ್ದಾರೆ.
ನಾನು ಭಾರತೀಯ ಸಂಸ್ಕೃತಿ ಮತ್ತು ಇಲ್ಲಿ ಆಹಾರ ಪದ್ಧತಿಯನ್ನು ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ. ಭಾರತದಲ್ಲಿ ಶೇಷವಾಗಿ ಲಡ್ಡು ಮತ್ತು ಐಸ್ ಕ್ರೀಮ್‌ಗಳನ್ನು ಹೆಚ್ಚು ಪ್ರೀಯವಾಗಿದೆ. ಇನ್ನು ನನಗೆ ಭಾರತ ಹಾಗೂ ಮಂಗಳೂರಿನ ಸಂಸ್ಕೃತಿಯನ್ನು ಯೂಟ್ಯೂಬ್ನಲ್ಲಿ ಆದಿತ್ಯ ತೋರಿಸಿದ್ದಾರೆ ಹಾಗಾಗಿ ಇಲ್ಲಿ ಪದ್ಧತಿ ಬಗ್ಗೆಯೂ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದಾರೆ.