Published On: Sat, Aug 10th, 2024

ಮಂಗಳೂರು: 9 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಸೆರೆ ಹಿಡಿದ ದಿಟ್ಟ ಮಹಿಳೆ!

ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್‌ ಎಂಬವರ ಮನೆಯ ಕೊಟ್ಟಿಗೆ ಸಮೀಪ ಸುಮಾರು 9 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಈ ದೈತ್ಯ ಹಾವನ್ನು ಲಕ್ಷ್ಮೀ ಕಾಮತ್‌ ಎಂಬವರು ಸೆರೆ ಹಿಡಿದು ರಕ್ಷಿಸಿದ್ದಾರೆ. ಇವರ ಈ ದಿಟ್ಟ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳವಾರ (ಆ.6) ರಾತ್ರಿ ಸುಮಾರು 9.30 ರ ಹೊತ್ತಿಗೆ ಬಾಲಕೃಷ್ಣ ಅವರ ಮನೆಯ ಕೊಟ್ಟಿಗೆಯ ಬಳಿ ಸುಮಾರು 9 ಅಡಿ ಉದ್ದದ ದೈತ್ಯ ಹೆಬ್ಬಾವು ಪತ್ತೆಯಾಗಿತ್ತು. ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಯಾರೂ ಕೂಡಾ ಹೆಬ್ಬಾವನ್ನು ಹಿಡಿದು ರಕ್ಷಿಸಿಲು ಮುಂದಾಗಲಿಲ್ಲ. ಹಾವು ಕಟ್ಟಿಗೆ ರಾಶಿ ಒಳಗೆ ಹೋದರೆ ಏನು ಮಾಡೋದು ಎಂಬ ಭೀತಿ ಎಲ್ಲರಲ್ಲೂ ಮೂಡಿತ್ತು. ಆ ಸಂದರ್ಭದಲ್ಲಿ ನೆರೆಮನೆಯ ಲಕ್ಷ್ಮೀ ಕಾಮತ್‌ ದಿಟ್ಟತನದಿಂದ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಬಳಿಕ ಉರಗ ತಜ್ಞ ಆದಿತ್ಯ ಅವರ ನೆರವಿನಿಂದ ಹೆಬ್ಬಾವನ್ನು ಗೋಣಿ ಚೀಲಕ್ಕೆ ತುಂಬಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟು ಬಂದಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter