ಜಗದೀಶ್ ಎಕ್ಕೂರು ನಿಧನ
ಮಂಗಳೂರು:ಇಲ್ಲಿನ ಪಡೀಲ್ ಸಮೀಪದ ಕೋಡಿಕಲ್ ನಿವಾಸಿ, ಮಂಗಳೂರು ಕೆ.ಎಸ್.ಆರ್.ಟಿ.ಸಿ. ನಿವೃತ್ತ ಉದ್ಯೋಗಿ ಜಗದೀಶ ಎಕ್ಕೂರು(೬೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ವಿವಿಧ ಧಾರ್ಮಿಕ ಮತ್ತು ಸಾಮಾಜಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.