ಪೇಜಾವರ: ಕುಕ್ಯಾನ್ ಕುಟುಂಬಿಕರಿಂದ ನಾಗ ದೇವರಿಗೆ ವಿಶೇಷ ಪೂಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಹಾಗೂ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಮಂಗಳೂರಿಗರ ಮಾತಿನಂತೆ, ಇದು ಸರ್ಪ ನಡೆ ನಾಗ ಜಡೆ ಎಂಬಂತೆ, ನಾಗ ದೇವರಿಗೆ ಕರಾವಳಿಯಲ್ಲಿ ಶ್ರದ್ಧ ಭಕ್ತಿಯ ಪೂಜೆ ನಡೆಯುತ್ತದೆ. ಅದರಲ್ಲೂ ಕುಟುಂಬದ ನಾಗನಿಗೆ ವಿಶೇಷ ಸ್ಥಾನಮಾನ ಇದೆ. ಈ ಕಾರಣಕ್ಕೆ ಕುಟುಂಬದ ನಾಗ ದೇವರುಗಳು ಹೆಚ್ಚಾಗಿ ಕಂಡು ಬರುತ್ತದೆ. ಇನ್ನು ಈ ಬಾರಿಯ ನಾಗರ ಪಂಚಮಿಯಂದು ಕುಕ್ಯಾನ್ ಕುಟುಂಬಿಕರು ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಕುಕ್ಯಾನ್ ಕುಟುಂಬಿಕರು ಇಂದು ತಮ್ಮ ಕುಟುಂಬದ ನಾಗ ಬಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಾಗನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಾಂದೊಟ್ಯ, ಕೆಂಜಾರ್ ಪೇಜಾವರ ಕುಕ್ಯಾನ್ ಮೂಲಸ್ಥಾನ ಶ್ರೀ ರಕ್ತೇಶ್ವರೀ ನಾಗ ಬ್ರಹ್ಮ ಸನ್ನಿಧಿಯಲ್ಲಿ ಈ ಸೇವೆ ನಡೆಸಲಾಗಿದೆ. ಇನ್ನು ಈ ಪೂಜಾ ಕಾರ್ಯದಲ್ಲಿ ದೊಡ್ಡಯ್ಯ ಪೂಜಾರಿ ಮತ್ತು ಸಹೋದರರು ಪದ್ಮಾನಭ ಕುಕ್ಯಾನ್, ತಾರಾನಾಥ್ ಕುಕ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಕ್ಯಾನ್ ಕುಟುಂಬಸ್ಥರು ಉಪಸ್ಥಿತರಿದರು.
ಕುಕ್ಯಾನ್ ಮೂಲಸ್ಥಾನ ಶ್ರೀ ರಕ್ತೇಶ್ವರೀ ನಾಗ ಬ್ರಹ್ಮ ಸನ್ನಿಧಿಯಲ್ಲಿ ನಾಗ ದೇವರಿಗೆ ಮಹಾಪೂಜೆ ಹಾಗೂ ತಂಬಿಲ ಸೇವೆಗಳು ನಡೆಯಿತು. ತಂತ್ರಿಗಳಾದ ಸೀತಾರಾಮ ಶಾಂತಿ ನೇತೃತ್ವದಲ್ಲಿ ನಾಗ ದೇವರಿಗೆ ಪೂಜೆಯನ್ನು ಸಲ್ಲಿಸಲಾಗಿತು.