ಇಸ್ಕಾನ್ ಸಂಸ್ಥಾಪಕರು 1971 ರ ಸಮಯದಲ್ಲಿ ತೆಗೆದುಕೊಂಡ ಆ ನಿರ್ಧಾರವೇನು? ಜನರಿಂದ ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡಿದ್ದು ಹೇಗೆ?

ರಾಜಕೀಯ ಅಸ್ಥಿರತೆ ಹಾಗೂ ಗಲಭೆಗ್ರಸ್ತವಾಗಿದ್ದು, ಬಾಂಗ್ಲಾ ದೇಶದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣವೊಂದು ನಿರ್ಮಾಣವಾಗಿದೆ. ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾ ದೇಶವನ್ನೇ ತೊರೆದು ಹೋಗಿದ್ದು, ಇತ್ತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಬಾಂಗ್ಲಾದೇಶದ ಖುಲ್ನಾ ವಿಭಾಗದಲ್ಲಿರುವ ಮೆಹರ್ಪುರದ ಇಸ್ಕಾನ್ ದೇವಾಲಯ ಮತ್ತು ಕಾಳಿ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಆದರೆ ಇಸ್ಕಾನ್ ಸಂಸ್ಥಾಪಕರು ಜನರ ಪರವಾಗಿ ಹಣವನ್ನು ಹೇಗೆ ಮರುಪಾವತಿ ಮಾಡಿದೆ ಎನ್ನುವ ವಿಚಾರ ಯಾರಿಗೂ ತಿಳಿದಿಲ್ಲ.
ಬಾಂಗ್ಲಾದೇಶವು ಹೊಸದಾಗಿ ರೂಪುಗೊಂಡ ಸಮಯದಲ್ಲಿ ಭೀಕರ ಬರಗಾಲವೊಂದು ಏರ್ಪಟ್ಟಿತ್ತು. ಅಲ್ಲಿಂದ ಜನರು ಹಸಿವಿನಿಂದ ನರಳಿ ನರಳಿ ಸಾಯುತ್ತಿದ್ದರು. ಆ ಸಮಯವನ್ನೇ ಒಂದೊಳ್ಳೆ ಕೆಲಸಕ್ಕಾಗಿ ಬಳಸಿಕೊಂಡವರು ಇಸ್ಕಾನ್ ಸಂಸ್ಥಾಪಕರಾದ ಸ್ವಾಮಿ ಪ್ರಭುಪಾದ್ ಅವರು ತಮ್ಮ ಅನುಯಾಯಿಗಳಾದ ಬಂಗಾಳಿ ಮೂಲದ ಪಂಡಿತ್ ರವಿಶಂಕರ್ ಮತ್ತು ಪ್ರಸಿದ್ಧ ಬ್ಯಾಂಡ್ ಬೀಟಲ್ಸ್ ಸಂಸ್ಥಾಪಕ ಜಾರ್ಜ್ ಹ್ಯಾರಿಸನ್. ಹೌದು, ನಾವು ಬಾಂಗ್ಲಾದೇಶದ ಹಸಿದ ಜನರಿಗೆ ಸಹಾಯ ಮಾಡಬೇಕೆಂದು ಮನವಿಟ್ಟರು.
ಹೀಗಾಗಿ ಜಾರ್ಜ್ ಹ್ಯಾರಿಸನ್ ಮತ್ತು ರವಿಶಂಕರ್ ಸೇವ್ ಬಾಂಗ್ಲಾದೇಶ ಲೈವ್ ಶೋ ಲೈವ್ ಕನ್ಸರ್ಟ್ ಅನ್ನು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಆಯೋಜನೆ ಮಾಡಿದರು. ಇಸ್ಕಾನ್ ಒದಗಿಸಿದ ಮೊದಲ ಪ್ರದರ್ಶನದಲ್ಲಿ 2.5 ಲಕ್ಷ ಡಾಲರ್ ಸಂಗ್ರಹಿಸಲಾಯಿತು. ಸರಿಸುಮಾರು ಮೂರು ತಿಂಗಳ ಸಮಯದಲ್ಲಿ ಇಸ್ಕಾನ್, ಜಾರ್ಜ್ ಹ್ಯಾರಿಸನ್ ಮತ್ತು ಪಂಡಿತ್ ರವಿಶಂಕರ್ ಅವರ ಸಹಾಯದಿಂದ ಬಾಂಗ್ಲಾದೇಶದ ಹಸಿದ ಮತ್ತು ಬೆತ್ತಲೆ ಜನರಿಗಾಗಿ ಪ್ರಪಂಚದಾದ್ಯಂತ 25 ಲಕ್ಷ ಡಾಲರ್‌ಗಳನ್ನು ಸಂಗ್ರಹಿಸಿತು. ಅದು 1971 ಸಮಯ, ಆ ಮೊತ್ತವು ಆ ಕಾಲಘಟ್ಟದಲ್ಲಿ ದೊಡ್ಡದು ಎನ್ನಬಹುದು.
ಹಸಿವಿನಿಂದಾಗಿ ಸಾಯುತ್ತಿದ್ದ ಅನೇಕರ ಹೊಟ್ಟೆಯ ಹಸಿವನ್ನು ನೀಗಿಸಿದರು. ಹೌದು,ತಿಂಗಳುಗಟ್ಟಲೇ ಢಾಕಾದ ಇಸ್ಕಾನ್ ದೇವಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಸ್ಕಾನ್ ನವರು ವಾಹನಗಳಲ್ಲಿ ಆಹಾರ ಸಾಗಿಸಿ ದೇಶದಾದಂತ್ಯ ಹಸಿದವರಿಗೆ ವಿತರಿಸಿದರು.. ಹೀಗೆ ಸರಿಸುಮಾರು ಎರಡು ವರ್ಷಗಳ ಕಾಲ ಬಾಂಗ್ಲಾದೇಶದ ಹಸಿದ ಜನರ ಹೊಟ್ಟೆಯನ್ನು ದೇವಾಲಯಕ್ಕೆ ಬಂದ ಹಣದಿಂದಲೇ ತುಂಬಿಸುವ ಮೂಲಕ ಮರುಪಾವತಿ ಮಾಡುವ ಕೆಲಸ ಮಾಡಿತ್ತು.