ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಂಘದ ವತಿಯಿಂದ ಸಹಾಯಧನ ವಿತರಣೆ
ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಂಘದ ಸದಸ್ಯರಾದ ರಮೇಶ್ ಪೂಜಾರಿ ಮಾರ್ನಬೈಲು ಅವರ ಪುತ್ರಿ ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಗಾಗಿ ಸಂಘದಿಂದ ಅಧ್ಯಕ್ಷರಾದ ಕೆ ಸಂಜೀವ ಪೂಜಾರಿ ಸಹಾಯಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ಅಶೋಕ್ ಪೂಜಾರಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಹಾಗೂ ಸಿ. ಇ.ಒ ಮಮತಾ ಜಿ ಉಪಸ್ಥಿತರಿದ್ದರು