ಕುಲವೂರು: ಲವಲವಿಕೆಯಿಂದ, ಆರೋಗ್ಯವಾಗಿದ್ದ ಮಹಿಳೆ ಹೃದಯಾಘಾತದಿಂದ ಸಾವು
ಕುಪ್ಪೆಪದವು: ಮಂಗಳೂರು ತಾಲೂಕಿನ ಕುಲವೂರು ಗ್ರಾಮದ ಬೊಳಿಯ ಎಂಬಲ್ಲಿ ಮಹಿಳೆಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಗಿರಿಜಾ(65) ಎಂದು ಹೇಳಲಾಗಿದೆ.
ಸಾವು ಹೇಗೆಲ್ಲ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಲವಲವಿಕೆಯಿಂದ, ಆರೋಗ್ಯವಾಗಿದ್ದ ಗಿರಜಾ ಅವರಿಗೆ ಏಕಾಏಕಿ ಎದೆ ನೋವು ಶುರುವಾಗಿತ್ತು. ತಕ್ಷಣ ಮನೆಯವರು ಮೂಡಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರು ತಮ್ಮ ಕೈಯಲ್ಲಿ ಆಗುವ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದರು, ಚಿಕಿತ್ಸೆ ಫಲಕಾರಿಯಾಗಿದೆ. ಮಹಿಳೆ ಮೃತಪಟ್ಟಿದ್ದಾರೆ. ಮೃತರು ಪತಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದು, ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಇವರ ಸೊಸೆ ಸುಷ್ಮಾ ಸಂತೋಷ್ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾಗಿದ್ದಾರೆ.