ಉಡುಪಿ : ಹೆಜಮಾಡಿಯ ಟ್ರೋಲ್ ಗೇಟ್ ಬಳಿ ಸಿಬ್ಬಂದಿಗೆ ಥಳಿಸಿದ್ದ ಯುವಕನ ಬಂಧನ
ಹೆಜಮಾಡಿಯ ಒಳ ರಸ್ತೆಯ ಕಿರು ಟೋಲ್ ಗೇಟ್ ಬಳಿ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ್ದ ಯುವಕನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಹೆಜಮಾಡಿಯ ಕಿರುಟೋಲ್ ಗೇಟ್ ಬಳಿಯಲ್ಲಿ ಕೆಂಪು ಬಣ್ಣದ ಕಾರು ಟೋಲ್ ನಿಯಮ ಉಲ್ಲಂಘಿಸಿ ಗೇಟ್ ದಾಟಿ ಮುಂದೆ ಹೋಗಿದ್ದು, ಕಾರು ಚಲಾಯಿಸುತ್ತಿದ್ದ ಯುವಕನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ನಿವಾಸಿ ಸಲೀಂ ಎನ್ನಲಾಗಿದೆ.
ನಿಯಮ ಉಲ್ಲಂಘಿಸಿದ್ದಂತೆ ಸಿಬ್ಬಂದಿಯು ಈ ಯುವಕನ ಬಳಿ ಪ್ರಶ್ನಿಸಿದ್ದಕ್ಕೆ ಉಡಾಫೆಯಾಗಿ ವರ್ತಿಸಿದ್ದಾನೆ. ಅದಲ್ಲದೇ, ಕಾರು ಚಾಲಕ ಡಿಕ್ಕಿಯಾಗುವಂತೆ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದು, ಕಾರು ನಿಲ್ಲಿಸಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆ ಸಂದರ್ಭ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯರು ಹಲ್ಲೆಗೊಳಗಾದ ಸಿಬ್ಬಂದಿಯ ನೆರವಿಗೆ ಧಾವಿಸಿದ್ದಾರೆ.
ಆದರೆ ಯುವಕನು ಮಾತ್ರ ಕಾರನ್ನು ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧ ಪಟ್ಟಂತೆ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ತಕ್ಷಣವೇ ಕೆಲಸ ಪ್ರವೃತ್ತರಾದ ಪಡುಬಿದ್ರಿ ಪೊಲೀಸರು ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಆರೋಪಿ ಸಲೀಂನನ್ನು ಬಂಧಿಸಿದ್ದಾರೆ.