ಅದ್ಯಪಾಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಈಗಾಗಲೇ ರೆಡ್​​ ಅಲರ್ಟ್​​​ ನೀಡಿಲಾಗಿದೆ. ಭಾರೀ ಮಳೆಯಿಂದ ನೇತ್ರಾವತಿ, ಫಲ್ಗುಣಿ ನದಿ ಸೇರಿದಂತೆ ಈ ಭಾಗ ಅನೇಕ ನದಿಗಳು ಉಕ್ಕಿ ಹರಿಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರದ ಒಬ್ಬ ಸಚಿವರು ಕೂಡ ಜಿಲ್ಲೆಗೆ ಭೇಟಿ ನೀಡಿಲ್ಲ. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಆರ್​ ಅಶೋಕ್​​​ ಭೇಟಿ ನೀಡಿ ದಕ್ಷಿಣ ಕನ್ನಡ ಉಸ್ತುವರಿ ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇದೀಗ ಮಂಗಳೂರಿನ ಉಸ್ತುವರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ.

ದಿನೇಶ್ ಗುಂಡೂರಾವ್ ಅವರು ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಸಚಿವರ ವಿರುದ್ಧ ಮಾತನಾಡಿದ್ದಾರೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಇದೇ ರೀತಿ ಸಮಸ್ಯೆ ಆಗುತ್ತದೆ. ಇದಕ್ಕಿಂತ ಸ್ವಲ್ಪ ವಿಷವಾದರೂ ಕೊಡಿ ಎಂದು ಜನರ ಆಕ್ರೋಶ ಸಚಿವರ ವಿರೋಧ ಅಕ್ರೋಶ ವ್ಯಕ್ತಪಡಿಸಿದರು.

ಮರವೂರು ಕಿಂಡಿ‌ ಅಣೆಕಟ್ಟಿಗೆ ಗೇಟ್ ಮಾಡಿದ್ರೆ ಸಮಸ್ಯೆ ಆಗಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇಲ್ಲಿ 11 ವರ್ಷದಿಂದ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಸರ್ಕಾರದ ಪರಿಹಾರದ ಹಣ ಬೇಡ, ಸಮಸ್ಯೆ ಬಗೆಹರಿಸಿ ನೀವು ಒಂದೆರಡು ದಿನ ಇಲ್ಲೇ ಇದ್ದರೆ ಅರ್ಥ ಆಗುತ್ತದೆ ಗ್ರಾಮಸ್ಥರು ಹೇಳಿದರು.

ಫಲ್ಗುಣಿ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರುಗಳು ಗ್ರಾಮಕ್ಕೆ ನುಗ್ಗಿದೆ. ಇದೀಗ ಅದ್ಯಪಾಡಿ ಗ್ರಾಮ ದ್ವೀಪದಂತಾಗಿದೆ. ಮಳೆಗಾಲ ಬಂದಾಗ ಸಂಪೂರ್ಣ ಮುಳುಗಡೆಯಾಗುವ ಅದ್ಯಪಾಡಿಯ ಮೋಗೆರ್ ಕುದ್ರು. ಈ ಬಾರಿಯೂ ಕೂಡ ಅದಕ್ಕಿಂತ ಹೆಚ್ಚಾಗಿ ಮುಳುಗಡೆಗೊಂಡಿದೆ. ಮಳೆಗಾಲದಲ್ಲಿ ಮೂರು ಸಾರಿ ನಮ್ಮ ಮನೆಗಳು ಮುಳುಗಡೆ ಆಗಿದೆ. ಪ್ರತಿ‌ ಸಾರಿ ನೀವು ಬಂದು ಹೋಗೊದು ಮಾತ್ರ, ಈ ಸಮಸ್ಯೆಗೆ ಪರಿಹಾರ ಇಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ, ನಮ್ಮ ಕೃಷಿ ಭೂಮಿ‌ ಹಾನಿ ಆಗಿದೆ ಎಂದು ಸಚಿವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.ಸಚಿವರೊಂದಿಗೆ ಕಾಂಗ್ರೇಸ್‌ ಮುಖಂಡರಾದ ಇನಯತ್ ಆಲಿ‌, ವಿನಯರಾಜ್‌ , ಮಾಜಿ ಗ್ರಾಂ. ಪಂ. ಅಧ್ಯಕ್ಷೆ ವಿಜಯ ಗೋಪಾಲ್‌ ಸುವರ್ಣ,ಪಂ. ಸದಸ್ಯರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಧಿಕಾರಿಗಳು ಇದ್ದರು

By Suddi9

Leave a Reply

Your email address will not be published. Required fields are marked *