ಕನಪಾಡಿ ಕೋಟ್ಯಾನ್ ಕುಟುಂಬಸ್ಥರ “ಆಟಿಡೊಂಜಿ ದಿನ”
ಬಂಟ್ವಾಳ: ಕೋಟ್ಯಾನ್ ಕುಟುಂಬಸ್ಥರ ಚಾವಡಿ ಮೇಗಿನ ಮನೆ ಕನಪಾಡಿ ಇದರ ವತಿಯಿಂದ 5ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕೋಟ್ಯಾನ್ ಕುಟುಂಬಸ್ಥರ ಯಜಮಾನರಾದ ಸೋಮಪ್ಪ ಕೋಟ್ಯಾನ್ ತುಂಬೆ ಇವರು ಸ್ವಸ್ತಿಕ ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ. ಮನೆಯ ಯಜಮಾನರಾದ ವಾಮಯ್ಯ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಹಿಂದಿನ ಕಾಲದ ಕೆಲವು ಒಳಾಂಗಣ ಕ್ರೀಡೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಕುಟುಂಬಸ್ಥರಿಗೆ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮನೆಯಲ್ಲಿ ತಯಾರಿಸಿ ತಂದಿದ್ದ 21 ಬಗೆಯ ಆಟಿಯ ಖ್ಯಾದ್ಯಗಳನ್ನು ಎಲ್ಲರೂ ಜತೆ ಸೇರಿ ಸವಿದರು.ಸಮಾರೋಪ ಸಂದರ್ಭದಲ್ಲಿಕೋಟ್ಯಾನ್ ಕುಟುಂಬಸ್ಥರ ಚಾವಡಿಯ ಗೌರವ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ ಪ್ರಸ್ತಾವನೆಗೈದು ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಟಿ ರಾಮಚಂದ್ರ ಸುವರ್ಣ ಅತಿಥಿಯಾಗಿ ಭಾಗವಹಿಸಿದ್ದರು. ಶುಭಹಾರೈಸಿದರು.
ಬಂಟ್ವಾಳ ಲಯನ್ಸ್ ಕ್ಲಬ್ ನ ನೂತನ ಕೋಶಾಧಿಕಾರಿ ದೇವಪ್ಪ ಡಿ ಪೂಜಾರಿ,ಪುದು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.
ಅದೇರಿಒತಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಅಭಿನಂದಿಸಲಾಯಿತಲ್ಲದೆ ಎಲ್ಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಕೋಟ್ಯಾನ್ ಕುಟುಂಬಸ್ಥರ ಚಾವಡಿ ಇದರ ಅಧ್ಯಕ್ಷರಾದ ದೇವಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಹಿರಿಯ ಸದಸ್ಯೆ ಲಕ್ಷ್ಮಿ ಪರ್ಲಕ್ಕೆ, ಉಪಾಧ್ಯಕ್ಷರಾದ ವಿವೇಕ್ ಕೋಟ್ಯಾನ್, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ನಿಕೇಶ್ ಕೋಟ್ಯಾನ್ ಸ್ವಾಗತಿಸಿದರು. ನಳಿನಿ ಕೋಟ್ಯಾನ್, ಲಾವಣ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕೋಟ್ಯಾನ್ ವಂದಿಸಿದರು.