ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆ
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ಮೊಡಂಕಾಪು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಜತೆ ಕಾರ್ಯದರ್ಶಿಯಾಗಿ ಬಾಸ್ಕರ್ ಟೈಲರ್ ಕಾಮಾಜೆ, ಕೋಶಾಧಿಕಾರಿಯಾಗಿ ಶ್ರೀಧರ್ ಶೆಣೈ, ಕ್ರೀಡಾಕಾರ್ಯದರ್ಶಿಗಳಾಗಿ ಆಶಾ ಪಿ. ರೈ ಬಿ.ಸಿ.ರೋಡು, ಪ್ರದೀಪ್ ಕೆ.ಎನ್. ಬಿ.ಸಿ.ರೋಡು, ಸಂದೀಪ್ ಬಿ.ಸಿ.ರೋಡು, ಶೈಲೇಶ್ ಬಿ.ಸಿ.ರೋಡು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.