ಮಂಗಳೂರು: ಬಸ್ನಲ್ಲಿ ವಿದ್ಯಾರ್ಥಿಗೆ ಹೃದಯಾಘಾತ, ಚಾಲಕ, ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ

ದಕ್ಷಿಣ ಕನ್ನಡದ ಜನರ ಮಾನವೀಯತೆಗೆ ಒಂದು ಸಲಾಂ ಹೇಳಲೇಬೇಕು, ಇಂತಹ ವಿಚಾರದಲ್ಲಿ ಮಂಗಳೂರು ಒಂದು ಕೈ ಮುಂದು, ಹೌದು, ಕರಾವಳಿ ಭಾಗದ ಬಸ್ ಚಾಲಕ ಹಾಗೂ ನಿರ್ವಹಕರು ಇಂತಹ ಕೆಲಸದಲ್ಲಿ ಮೆಚ್ಚಲೇಬೇಕು. ಕೂಳೂರು ಮಾರ್ಗದಲ್ಲಿ ಸಾಗುವ 13ಎಫ್ ಕೃಷ್ಣ ಪ್ರಸಾದ್ ಬಸ್ ಎಂದಿನಂತೆ ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ, ಸುರೇಶ್ ತಕ್ಷಣ ಎಚ್ಚೆತ್ತು ಬಸ್ನ್ನು ಆಸ್ಪತ್ರೆಯತ್ತ ತಿರುಗಿಸಿದ್ದಾರೆ.
ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಸುರೇಶ್ ಅವರ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಹಿಂಜರಿಕೆಯಿಲ್ಲದೆ ಬಸ್ ಅನ್ನು ತುರ್ತು ವಾಹನದಂತೆ ಆಸ್ಪತ್ರೆಯತ್ತ ತಿರುಗಿಸಿದ್ದಾರೆ. ದಾರಿಯೂದ್ದಕ್ಕೂ ವಾರ್ನ್ ಹಾಕುತ್ತ ಹೋಗಿದ್ದಾರೆ. ರಸ್ತೆಯಲ್ಲಿ ಇತರ ವಾಹನ ಸವಾರರು ಕೂಡ ಅವರ ಬಸ್ಗೆ ದಾರಿ ಮಾಡಿಕೊಟ್ಟಿದ್ದಾರೆ.
ಆಸ್ಪತ್ರೆ 6 ಕಿಲೋಮೀಟರ್ ದೂರವಿದ್ದರು, ಚಾಲಕ ಕೇವಲ 6 ನಿಮಿಷದಲ್ಲಿ ತಲುಪಿಸಿದ್ದಾರೆ. ವಿದ್ಯಾರ್ಥಿಯನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯು ಕೂಡ ಆಸ್ಪತ್ರೆಯ ಎಲ್ಲ ಕ್ರಮಗಳನ್ನು ಮೀರಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಫಾದರ್ ಮುಲ್ಲರ್ ಆಸ್ಪತ್ರೆ ಒಳಗೆ ಖಾಸಗಿ ವಾಹನಗಳು ಬರುವಂತಿಲ್ಲ, ಆದರೆ ಆಸ್ಪತ್ರೆ ಸಿಬ್ಬಂದಿ ಈ ವಿಚಾರದಲ್ಲಿ ಈ ನಿಮಯವನ್ನು ಮೀರಿ ಬಸ್ಗೆ ಆಸ್ಪತ್ರೆ ಆವರಣದ ಒಳಗೆ ಬರಲು ಅನುಮತಿ ನೀಡಿದ್ದಾರೆ.
ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಸುರೇಶ್ ಅವರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿ ಅಪಾಯದಿಂದ ಪರರಾಗಿದ್ದಾರೆ ಎಂದು ಹೇಳಲಾಗಿದೆ. ವಿದ್ಯಾರ್ಥಿ ಸ್ಥಿತಿ ಇದೀಗ ಸುಧಾರಿಸಿದೆ. ಇದೀಗ ಇವರಿಗೆ ಇಡೀ ಮಂಗಳೂರು ಜನರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.