ಹಣ್ಣಾದ ಬಾಳೆಹಣ್ಣು ಬಿಸಾಡುವ ಬದಲು ರುಚಿಕರವಾದ ಹಲ್ವಾ ಮಾಡಿ, ಇಲ್ಲಿದೆ ರೆಸಿಪಿ

ಎಲ್ಲರ ಮನೆಯಲ್ಲಿ ಸಹಜವಾಗಿ ಬಾಳೆಹಣ್ಣು ಇದ್ದೆ ಇರುತ್ತದೆ. ಹೀಗಾಗಿ ಕೆಲವರಿಗೆ ಬಾಳೆ ಹಣ್ಣು ತಿಂದು ಬೇಡ ಎನ್ನುವಂತಾಗಿರುತ್ತದೆ. ಇನ್ನು ಕೆಲವೊಮ್ಮೆ ಮನೆಯಲ್ಲಿಟ್ಟ ಬಾಳೆಹನ್ನು ಹಣ್ಣಾಗಿ, ಇನ್ನೇನು ಒಂದೆರಡು ದಿನಗಳ ಕಾಲವಿಟ್ಟರೆ ಕೊಳೆತು ಹೋಗುತ್ತದೆ. ಹೀಗಾದಾಗ ಈ ಹೆಣ್ಣಿನಿಂದ ಸುಲಭವಾಗಿ ಹಲ್ವಾ ಮಾಡಿ ಸವಿಯಬಹುದು. ಈ ರೆಸಿಪಿ ಮಾಡಲು ಕೆಲವೇ ಕೆಲವು ಸಾಮಗ್ರಿಗಳಿದ್ದರೆ ಸಾಕು, ಮನೆಯಲ್ಲಿ ಸುಲಭವಾಗಿ ಬೇಕರಿಯಲ್ಲಿ ಸಿಗುವ ಹಲ್ವಾಕ್ಕಿಂತ ರುಚಿಯಾದ ಹಲ್ವಾ ಮಾಡಬಹುದು. ಅರ್ಧಗಂಟೆಯಲ್ಲೇ ಈ ರುಚಿ ರುಚಿಯಾದ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
ಬಾಳೆಹಣ್ಣಿನ ಹಲ್ವಾಗೆ ಬೇಕಾಗುವ ಸಾಮಗ್ರಿಗಳು
- ಹಣ್ಣಾದ ಬಾಳೆಹಣ್ಣು
- ಕಾಲು ಕಪ್ ಜೋಳದ ಹಿಟ್ಟು
- ಅರ್ಧ ಕಪ್ ಸಕ್ಕರೆ
- ಎರಡು ಚಮಚ ತುಪ್ಪ
ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ
- ಮೊದಲಿಗೆ ಬಾಳೆಹಣ್ಣು ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ನೀರು ಸೇರಿಸದೆ ರುಬ್ಬಿಕೊಳ್ಳಿ.
- ಆ ಬಳಿಕ ಇದಕ್ಕೆ ಸಕ್ಕರೆ, ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಬಿಸಿಯಾಗುತ್ತಿದ್ದಂತೆ ತುಪ್ಪ ಹಾಕಿ, ನಂತರದಲ್ಲಿ ಈ ಬಾಳೆಹಣ್ಣು ಮಿಶ್ರಣ ಹಾಕಿ ಕೈಯಾಡಿಸುತ್ತ ಇರಿ.
- ಹಲ್ವಾ ಗಟ್ಟಿಯಾಗುತ್ತಿದ್ದಂತೆ ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣ ಹಾಕಿ ತಟ್ಟೆಯ ತುಂಬಾ ಸವರಿ ಹದಿನೈದು ನಿಮಿಷ ಬಿಟ್ಟರೆ ರುಚಿ ರುಚಿಯಾದ ಬಾಳೆಹಣ್ಣಿನ ಹಲ್ವಾ ಸವಿಯಲು ಸಿದ್ಧ.