ಬಂಟ್ವಾಳ: ಅಪಾಯದ ಮಟ್ಟಮೀರಿ ಹರಿಯುತ್ತಿರುವ ನೆತ್ರಾವತಿ, ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿ ಮುಳುಗಡೆ

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೀಗ ಬಂಟ್ವಾಳ ತಾಲೂಕಿನಲ್ಲಿ ನೇತ್ರವತಿ ನದಿ ಮುಳುಗಿದೆ. ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅಪಾಯದ ಮಟ್ಟಮೀರಿ ನೆತ್ರಾವತಿ ನದಿ ಹರಿಯುತ್ತಿದೆ. ಈಗಾಗಲೇ ಜಿಲ್ಲಾಡಳಿತ ಸ್ಥಳೀಯರಿಗೆ ಎಚ್ಚರಿಕೆಯನ್ನು ನೀಡಿದ್ದು, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ನೀಡಿಲಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೂ ರಜೆಯನ್ನು ಘೋಷಣೆ ಮಾಡಲಾಗಿದೆ.
ಬಿ ಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲಾ ಜಲಾವೃತಗೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಅಂಗಡಿಗಳಿಂದ ವಸ್ತುಗಳನ್ನು ತೆರವು ಮಾಡಲು ವರ್ತಕರ ಪರದಾಟ ಮಾಡುವಂತಾಗಿದೆ. ನೇತ್ರಾವತಿ ನದಿ ನೀರು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈಗಾಗಲೇ ಪೊಲೀಸರು ಹಾಗೂ ಸ್ಥಳೀಯ ಜನರು ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳು ತೆರವು ಕಾರ್ಯ ಸಹಾಯ ಮಾಡಿದ್ದಾರೆ.
ಬಂಟ್ವಾಳದ ಪುರಸಭಾ ವಾಣಿಜ್ಯ ಸಂಕೀರ್ಣ ಜಲಾವೃತಗೊಂಡಿದೆ ಫನ್ ಟೈಂ ರೆಸ್ಟೋರೆಂಟ್, ಮಾಸ್ಟರ್ ಫರ್ನಿಚರ್, ಹೋಟೆಲ್ ಆರ್ಯದುರ್ಗಾ, ಬೇಕರಿ, ಫ್ಯಾನ್ಸಿ, ಮೊಬೈಲ್ ಅಂಗಡಿಗಳು ಕೂಡ ನೀರಿನಿಂದ ಮುಳುಗಿದೆ. ಇನ್ನು ಪುರಸಭೆ ಕಟ್ಟಡದ ಅಂಗಡಿಗಳು ಪ್ರತಿಬಾರಿ ಪ್ರವಾಹ ಬಂದಾಗ ಮುಳುಗಡೆಯಾಗುವುದು ಎಂದು ಹೇಳಲಾಗಿದೆ.