Published On: Tue, Jul 30th, 2024

ಮೂಡಬಿದಿರೆ: ಗ್ಯಾಸ್ ಗೀಸರ್​​​​ನಿಂದ ವಿಷಾನಿಲ‌ ಸೋರಿಕೆ, 18 ವರ್ಷದ ಶಾರಿಕ್ ಸಾವು

ಯುವಕನೊಬ್ಬ ಗ್ಯಾಸ್ ಗೀಸರ್​​​​ನಿಂದ ವಿಷಾನಿಲ‌ ಸೋರಿಕೆಯಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಮಂಗಳೂರಿನ ಮೂಡಬಿದಿರೆ ತಾಲೂಕಿನ ಕೋಟೆಬಾಗಿಲು‌ ಎಂಬಲ್ಲಿ ನಡೆದಿದೆ. ಸ್ನಾನಕ್ಕೆಂದು ಹೋಗಿದ್ದ ಯುವಕ ಉಸಿರುಗಟ್ಟಿ ಬಾತ್​​​ ರೂಮ್​​ನಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಸಾವನ್ನಪ್ಪಿರುವ ಯುವಕನನ್ನು ಶಾರಿಕ್ (18) ಎಂದು ಗುರುತಿಸಲಾಗಿದೆ. ಶಾರಿಕ್ ಅವರ ಕುಟುಂಬ ಕೋಟೆಬಾಗಿಲಿನ ಪ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಶಾರಿಕ್ ಬೆಳಿಗ್ಗೆ ಸಾನ್ನ ಮಾಡಲು ಬಾತ್​​ ರೂಮ್​​ಗೆ ಹೋದವನು ತುಂಬಾ ಹೊತ್ತಾದರು ಬಾತ್​​ ರೂಮ್​​ನಿಂದ ಹೊರಗೆ ಬಂದಿಲ್ಲ. ಮನೆಯವರಿಗೆ ಅನುಮಾನ ಬಂದು ಬಾಗಿಲು ಬಡಿದ್ದಾರೆ. ಒಳಗಿನಿಂದ ಲಾಕ್​​ ಆಗಿರುವ ಕಾರಣ ಬಾಗಿಲನ್ನು ಮನೆಯವರು ಹೊಡೆದಿದ್ದಾರೆ.

ಬಾಗಿಲು ಓಪನ್​​ ಮಾಡಿದಾಗ ಶಾರಿಕ್​​​​ ನೆಲದಲ್ಲಿ ಸಾವನ್ನಪ್ಪಿ ಬಿದ್ದಿದ್ದಾನೆ. ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಮನೆಯವರ ದುಃಖ ಮುಗಿಲು ಮುಟ್ಟಿದೆ ಎಂದು ಹೇಳಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter