ರಿಕ್ಷಾ ಚಾಲಕನ ಜತೆಗೆ ವಾಗ್ವಾದ ನಡೆಸುತ್ತಿದ್ದಾಗ ಹೃದಯಾಘಾತ, ನರಹತ್ಯೆ ಪ್ರಕರಣ ದಾಖಲಿಸಿದ ಪೊಲೀಸರು
ನೋಡಿ ಮರಣ ಹೇಗೆಲ್ಲ ಬರುತ್ತದೆ ಎಂದು, ಹೌದು ಮಹಾರಾಷ್ಟ್ರದ ಥಾಣೆಯಲ್ಲಿ ಯುವಕನೊಬ್ಬ ರಿಕ್ಷಾ ಚಾಲಕನ ಜತೆಗೆ ವಾಗ್ವಾದ ನಡೆಸುತ್ತಿದ್ದಾಗ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಥಾಣೆ ಶಿವಸೇನಾ (ಯುಬಿಟಿ) ನಾಯಕನ ಮಗ ಎಂದು ಹೇಳಲಾಗಿದೆ. ಈಗಾಗಲೇ ಇದು ಕೊಲೆಗೆ ಸಮಾನವಲ್ಲದ ಅಪರಾಧದ ನರಹತ್ಯೆಯ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
ಶಿವಸೇನೆಯ ಮಾಜಿ ಥಾಣೆ ಜಿಲ್ಲಾ ಮುಖ್ಯಸ್ಥ ರಘುನಾಥ್ ಮೋರೆ ಅವರ ಪುತ್ರ ಮಿಲಿಂದ್ ಮೋರೆ ಅವರು ತಮ್ಮ ಕುಟುಂಬದೊಂದಿಗೆ ನವಾಪುರದ ರೆಸಾರ್ಟ್‌ನಲ್ಲಿ ಭಾನುವಾರ ಸಂಜೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ತಿಳಿಸಿದ್ದಾರೆ. ರೆಸಾರ್ಟ್‌ನಿಂದ ಹೊರಗೆ ಹೋಗುವಾಗ, ಅವರು ರಿಕ್ಷಾ ಚಾಲಕನೊಂದಿಗೆ ಜಗಳವಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾರೆ. ತಕ್ಷಣ ಮನೆಯವರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇನ್ನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹೃದಯಾಘಾತವು ಪ್ರಾಥಮಿಕ ಕಾರಣವೆಂದು ಹೇಳಲಾಗಿದೆ. ಮೋರ್ ಅವರ ಕುಟುಂಬದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 105 (ಕೊಲೆಗೆ ಸಮನಿಲ್ಲದ ಅಪರಾಧಿ ನರಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಿಲಿಂದ್ ಮೋರೆ ಅವರು ಶಿವಸೇನೆಯ (ಯುಬಿಟಿ) ಥಾಣೆ ಘಟಕದ ಉಪ ಮುಖ್ಯಸ್ಥರಾಗಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅರ್ನಾಲಾ ಬೀಚ್ ಬಳಿಯ ಅನಧಿಕೃತ ರೆಸಾರ್ಟ್‌ಗಳನ್ನು ನೆಲಸಮಗೊಳಿಸುವಂತೆ ನಾಗರಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಸಾಯಿ-ವಿರಾರ್ ಮುನ್ಸಿಪಲ್ ಕಾರ್ಪೊರೇಷನ್ (ವಿವಿಎಂಸಿ) ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಪ್ರಾರಂಭಿಸಿದೆ ಎಂದು ಹೇಳಲಾಗಿದೆ.