Published On: Tue, Jul 30th, 2024

ಪ್ರಕೃತಿಯ ಸೌಂದರ್ಯದ ನಡುವೆ ಕೆಮ್ಮಣ್ಣು ಹ್ಯಾಂಗಿಂಗ್ ಬ್ರಿಡ್ಜ್ ಸೊಬಗು

Kemmannu Hanging Bridge

ಪ್ರವಾಸಿಗರು ಸ್ವಲ್ಪ ಬಿಡುವುದು ಸಿಕ್ಕೊಡನೆ ಎಲ್ಲಿಗೆ ಹೋಗುವುದು ಪ್ಲಾನ್ ಮಾಡುವುದು ಸಹಜ. ಪ್ರವಾಸಿ ತಾಣಗಳನ್ನು ವೀಕ್ಷಿಸಿ ಬೇಕೆನ್ನುವವರು ಉಡುಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಉಡುಪಿ ಹೆಸರು ಕೇಳುತ್ತಿದ್ದಂತೆ ನೆನಪಾಗುವುದೇ ಸಾಲು ಸಾಲು ದೇವಾಲಯಗಳು. ಇದನ್ನು ಹೊರತು ಪಡಿಸಿ ವಿವಿಧ ಪ್ರೇಕ್ಷಕಣೀಯ ತಾಣಗಳನ್ನು ನೀವಿಲ್ಲಿ ಕಾಣಬಹುದು. ಬಿಡುವು ಮಾಡಿಕೊಂಡು ಉಡುಪಿಯತ್ತ ಸುತ್ತಾಡಲು ಬಂದರೆ ಹದಿನೈದು ಹೆಚ್ಚು ತಾಣಗಳ ಸೌಂದರ್ಯವನ್ನು ಸವಿಯಬಹುದು. ನೀವೇನಾದರೂ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುವ ಹವ್ಯಾಸ ಹೊಂದಿದ್ದರೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡುವುದು ಉತ್ತಮ.

ಈ ಸೇತುವೆಯು ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರದಿಂದ ಸುತ್ತುವರೆದರೆ, ಪೂರ್ವ ಭಾಗದಲ್ಲಿ ಸುವರ್ಣ ನದಿಯಿಂದ ಸುತ್ತುವರೆದಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ತೋನ್ಸೆ ಸಮೀಪದ ‘ಕೆಮ್ಮಣ್ಣು ತೂಗು ಸೇತುವೆ” ಉಡುಪಿಯ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿ ಬದಲಾಗಿದೆ. ಇದನ್ನು ವೀಕ್ಷಿಸಲೆಂದೇ ಬೇರೆ ಬೇರೆ ಸ್ಥಳಗಳಿಂದ ಪ್ರವಾಸಿಗರ ದಂಡೇ ಇಲ್ಲಿಗೆ ಬರುತ್ತದೆ. ಸ್ವರ್ಣಾ ನದಿಯ ಎರಡು ದಡಗಳಾದ ತಿಮ್ಮಣ್ಣ ಕುದ್ರು ಮತ್ತು ಪಡುಕುದ್ರು ದ್ವೀಪದ ಜನರನ್ನು ಸಂಪರ್ಕಿಸುವ ಸೇತುವೆಯೇ ಇದಾಗಿದೆ. ಡೆಲ್ಟಾ ಬೀಚ್’ನಿಂದ 7.5 ಕಿಮೀ ದೂರದಲ್ಲಿದ್ದು, ಇದೀಗ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

1991 ರಲ್ಲಿ ಕೆಮ್ಮಣ್ಣು ತೂಗು ಸೇತುವೆಯನ್ನು ಮರದಿಂದ ಮಾಡಲಾಗಿತ್ತು. ಆದರೆ 2015ರಲ್ಲಿ ಇಲ್ಲಿನ ಸ್ಥಳೀಯರು 10 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಹಲಗೆಗಳ ಹಾಕಿ ಈ ಸೇತುವೆಯನ್ನು ನವೀಕರಣ ಮಾಡಿದರು. ಪ್ರವಾಸಿಗರು ಇಲ್ಲಿಗೆ ಆಗಮಿಸಿದರೆ ತೂಗು ಸೇತುವೆಯ ಮೇಲೆ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಇಲ್ಲಿಗೆ ತಲುಪಲು ಬಸ್ ವ್ಯವಸ್ಥೆಯೂ ಇದ್ದು, ಉಡುಪಿಯಿಂದ ಕೆಮ್ಮಣ್ಣುಗೆ ಬಸ್ಸಿನಲ್ಲಿ ಹೋಗಬೇಕಾಗುತ್ತದೆ. ಅಲ್ಲಿಂದ ನಂತರ ಸೇತುವೆ ಇರುವಲ್ಲಿಗೆ ನಡೆದುಕೊಂಡೆ ಹೋಗಬಹುದು. ನಡೆಯಲು ಆಗಲ್ಲ ಎನ್ನುವವರು ಟ್ಯಾಕ್ಸಿ ಮಾಡಿಸಿಕೊಂಡು ಹೋಗಬಹುದಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter