Published On: Thu, Jul 25th, 2024

ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ.ದ ವಾರ್ಷಿಕ ಮಹಾಸಭೆ 

ಬಂಟ್ವಾಳ: ತೆಂಗಿನಕಾಯಿಗೆ ಉತ್ತಮ ಧಾರಣೆ, ಕೃಷಿಕರಿಗೆ ಗುಣಮಟ್ಟದ ತೆಂಗಿನ ಗಿಡದ ಲಭ್ಯತೆ, ಸಿಯಾಳಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ. ಬಂಟ್ವಾಳ   2018ರಲ್ಲಿ  ಅನುಷ್ಠಾನಕ್ಕೆ ಬಂದಿದೆ ಎಂದು ನಿಯಮಿತದ ಅಧ್ಯಕ್ಷ ರಾಜಾ ಬಂಟ್ವಾಳ್ ಹೇಳಿದ್ದಾರೆ.
ಅವರು  ಬಿ. ಸಿ. ರೋಡ್ ರಂಗೋಲಿ ಸಭಾಂಗಣದಲ್ಲಿ ನಡೆದ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೆಂಗಿನ ಸಿಪ್ಪೆ ಹುಡಿ ಮಾಡುವ ಯಂತ್ರವನ್ನು ಸ್ವತಃ ಖರೀದಿಸಿ ಸದಸ್ಯ ರೈತರಿಗೆ ಬಾಡಿಗೆಯಲ್ಲಿ ನೀಡುವ ಯೋಜನೆ ರೂಪಿಸಿದೆ.ಐದು ವರ್ಷಗಳ ಹಿಂದೆ ವ್ಯವಹಾರ  ಆರಂಭಿಸಿ ಹಂತ ಹಂತದಲ್ಲಿ ಪ್ರಗತಿ ಹೊಂದಿ  2023 – 24ರ ಸಾಲಿಗೆ 4.05 ಕೋಟಿ ವ್ಯವಹಾರ ಮಾಡಿ 2.89 ಲಕ್ಷ ನಿವ್ವಳ ಲಾಭ ಪಡೆದಿದ್ದು,ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ.6 ಡಿವಿಡೆಂಡ್ ನ್ನು ಘೋಷಿಸಿದರು.
ಸದಸ್ಯರ ಸಲಹೆಯಂತೆ
ಮುಂದಿನ ಆರ್ಥಿಕ ವರ್ಷದಿಂದ “ತೆಂಗು ಉತ್ತಮ ಕೃಷಿಕ” ಪುರಸ್ಕಾರ ನೀಡುವ ಬಗ್ಗೆಯು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪದಿಂದಾಗಿ ಒಂದು ತೆಂಗಿನ ಮರ ನಾಶವಾದಲ್ಲಿ ಸರಕಾರದಿಂದ  5 ಸಾ.ರೂ. ಪರಿಹಾರ, ಸ್ಥಳೀಯವಾಗಿ ಸಿಯಾಳವನ್ನು ಸಾರ್ವಜನಿಕವಾಗಿ ವಿತರಿಸಲು ರೈತರಿಗೆ ಆಯಾ ಗ್ರಾ.ಪಂ., ಪುರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ನೀಡುವಂತೆ ಒತ್ತಾಯಿಸಿ  ಜಿಲ್ಲಾಡಳಿತಕ್ಕೆ ಶೀಘ್ರವೇ ಮನವಿ ಸಲ್ಲಿಸಲಾಗುವುದು  ಎಂದರು.
ಸದಸ್ಯರಾದ ಪಿಯುಸ್ ಎಲ್. ರೋಡ್ರಿಗಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಲಹೆ ನೀಡಿದರು.
ನಿರ್ದೇಶಕರಾದ ಶಶಿಕಲಾ ಕೃಷ್ಣ ಭಂಡಾರಿ, ಪ್ರೇಮನಾಥ ಶೆಟ್ಟಿ ಅಂತರ, ವಿಠಲ ಸಪಲ್ಯ ಬಿಕ್ರೋಡಿ, ಸದಾಶಿವ ಬಂಗುಲೆ, ನಾಗೇಶ್ ಕಲ್ಯಾರು, ಯಾದವ ದರ್ಖಾಸ್, ರಜತ್ ರಾಜ್,ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಕೇದಾರನಾಥ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ ,ಉಪನ್ಯಾಸಕ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶರಣಪ್ಪ ಉಮರಗಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಹರ್ಷಿತ್ ಕುಮಾರ್ ಪಿ. ಲೆಕ್ಕಪತ್ರ ಮಂಡಿಸಿದರು.ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter