ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ.

ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ತ್ಯಾಗಿ ಸಿನಿಮಾಗಳಲ್ಲಿ ಐಟಂ ಸಾಂಗ್ನಲ್ಲಿ ಕುಣಿಯುವ ಮತ್ತು ಬಟ್ಟೆ ಬಿಚ್ಚುವ ನಟಿಯರನ್ನು ವೇಶ್ಯೆಯರೆಂದು ಘೋಷಿಸಬೇಕು. ಅಶ್ಲೀಲತೆ ಮೂಲಕ ಹಣ ಸಂಪಾದಿಸುವ ಮಹಿಳೆಯರು ವೇಶ್ಯೆಯರು ಎಂದು ಹೇಳಿದ್ದು, ಈ ಸಂಬಂಧ ತಾನು ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಹತ್ತುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲ, ಶಾಲೆಗಳಲ್ಲಿ ಹುಡುಗಿಯರು ಸ್ಕರ್ಟ್ ತೊಡುವುದು, ಜೀನ್ಸ್ ಧರಿಸುವುದನ್ನೂ ನಿಷೇಧಿಸಬೇಕು. ಜೊತೆಗೆ ಹುಡುಗಿಯರ ಕೈಗೆ ಮೊಬೈಲನ್ನು ಕೊಡಬಾರದು ಎಂದು ಹಿಂದೂ ಸಂಘಟನೆಯ ಮುಖಂಡ ಆಗ್ರಹಿಸಿದ್ದಾರೆ. ನವೀನ್ ತ್ಯಾಗಿಯ ಈ ವಿವಾದಾತ್ಮಕ ಹೇಳಿಕೆಗೆ ಹಿಂದೂ ಮಹಾಸಭಾದ ಮುಖ್ಯಸ್ಥರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
