ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ
ಬಂಟ್ವಾಳ: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘ ಇದರ ೨೦೨೩-೨೪ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆಯಗಿದ್ದಾರೆ.
ಕಾರ್ಯದರ್ಶಿಯಾಗಿ ರೋಹಿತ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ ಮಹೇಶ್, ಉಪಾಧ್ಯಕ್ಷರಾಗಿ ನಿತಿನ್ ಮಿತ್ತಬೈಲು, ಹರೀಶ್ ಅಗ್ರಬೈಲು, ಜತೆ ಕಾರ್ಯದರ್ಶಿಯಾಗಿ ಸಂತೋಷ್ ಅಜ್ಜಿಬೆಟ್ಟು, ಜಿತೇಂದ್ರ ಮಿತಬೈಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತ್ ಅಗ್ರಬೈಲು, ಪ್ರಣಾಮ್ ಅಜ್ಜಿಬೆಟ್ಟು, ಆಶಿಶ್ ಅಜ್ಜಿಬೆಟ್ಟು, ಕ್ರೀಡಾಕಾರ್ಯದರ್ಶಿಯಾಗಿ ಪ್ರವೀಣ್ ಅಂಚನ್, ಚರಣ್ ಅಗ್ರಬೈಲು, ಪ್ರತಿಶ್ ಅಜ್ಜಿಬೆಟ್ಟು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.