ಮಳೆಯ ಅರ್ಭಟ ಕಡಿಮೆಯಾದರೂ ಮುಂದುವರಿದ ಹಾನಿ
ಬಂಟ್ವಾಳ:ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಮಳೆಯ ಅರ್ಭಟ ಕಡಿಮೆಯಾದರೂ ಕೆಲವಡೆಯಲ್ಲಿ ಹಾನಿ ಮುಂದುವರಿದಿದೆ.

ತಾಲೂಕಿನ ಪುದು ಗ್ರಾಮದ ಜಯಶ್ರೀ ಅವರ ಮನೆಗೆ ಹೊಂದಿದ ಬರೆ ಜರಿದು ಬಿದ್ದಿದ್ದು ಮನೆ ತಳ ಕುಸಿಯುವ ಹಂತದಲ್ಲಿದೆ. ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅರುಣ ರವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ವೀರಕಂಭ ಗ್ರಾಮದ ಮಂಗಲಪದವು ಎಂಬಲ್ಲಿ ಶಂಕರ ಕೊರಗ ಅವರ ಮನೆ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿದೆ.

ಮೇರಮಜಲು ಗ್ರಾಮದ ಬಡ್ಡುರು ಕಾನ ಜುಲಿಯಾನ ಡಿಸೋಜರ ಮನೆಗೆ ಹೊಂದಿದ ಬರೆ ಕುಸಿದು ಬಿದ್ದಿದ್ದು, ಮನೆ ತಳ ಕುಸಿಯುವ ಹಂತದಲ್ಲಿದೆ.

ಇದೇ ಗ್ರಾಮದ ಲಾರೆನ್ಸ್ ಡಿಸೋಜ ರ ಮನೆ ಗೋಡೆ ಹಾಗೂ ಹಂಚು ಪೂರ್ತಿ ಹಾನಿಯಾಗಿರುತ್ತದೆ ಹಾಗೆಯೇ ಈ ಗ್ರಾಮದ ಮೇರಿ ಬ್ರಾಗ್ ರವರ ತೋಟ ಅಡಿಕೆ ಕೃಷಿ ಹಾನಿಯಾದರೆ,ಇದೇ ಸ್ಥಳದಲ್ಲಿ ವಿಲಿಯಂ ಲ್ಯಾನ್ಸಿ ಪಿರೇರಾ ರವರ 60 ಅಡಿಕೆ ಮರ, 40 ಬಾಳೆ ಗಿಡ ಕೃಷಿ ಹಾನಿಯಾಗಿದೆ.ಮಂಗಳವಾರವು ಬಂಟ್ವಾಳ ತಾಲೂಕಿನಲ್ಲಿಮಳೆಯ ತೀವ್ರತೆ ಕಡಿಮೆ ಇತ್ತು.ನೇತ್ರಾವತಿಯಲ್ಲು ನೀರಿನಮಟ್ಟ ಇಳಿಕೆಯಾಗಿದೆ.