ಅನಾಥವಾಗಿ ನಿಂತಿದ್ದ ಓಲ ಇಲೆಕ್ಟಿçಕ್ ಸ್ಕೂಟರ್” ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಕೈಕಂಬ: ಮಂಗಳೂರು ಸರಿಪಳ್ಳ ಕನ್ನಗುಡ್ಡೆಗೆ ಹತ್ತಿರದ ನೂಜಿಯ ನಿವಾಸಿ, ಹವ್ಯಾಸಿ ಫೋಟೊಗ್ರಾಫರ್ ಗಣೇಶ್ ನೂಜಿ(೪೮) ಎಂಬವರ ಓಲ ಇಲೆಕ್ಟಿçಕ್ ಸ್ಕೂಟರ್ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ಪತ್ತೆಯಾಗಿದ್ದು, ಈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ಸೇತುವೆಯ ಒಂದು ಪಾರ್ಶ್ವದಲ್ಲಿ ಕಳೆದ ರಾತ್ರಿಯಿಂದ ಸ್ಕೂಟರ್ ಅನಾಥವಾಗಿ ನಿಂತಿದ್ದು, ಅದರ ಪಕ್ಕದಲ್ಲಿ ಪಾದರಕ್ಷೆ ಕಂಡು ಬಂದಿದೆ. ಕಣ್ಣೂರಿನ ವಾಚ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಮನೆಯವರು ಹೇಳಿದ್ದಾರೆ.
ಗಣೇಶ್ ನೂಜಿ ನಾಪತ್ತೆ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿದೆ. ಸ್ಕೂಟರ್ ಇದ್ದ ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ ಈತನ ಮನೆಯವರು ಆಗಮಿಸಿ ಪರಿಶೀಲನೆ ನಡೆಸಿ, ನದಿಯಲ್ಲಿ ಹಾಗೂ ಇತರೆಡೆ ಹುಡುಕಾಟ ಆರಂಭಿಸಿದ್ದಾರೆ. ವಿವಾಹಿತ ಗಣೇಶ್‌ಗೆ ಓರ್ವ ಪುತ್ರಿ ಇದ್ದಾಳೆ.