ಬಿ. ಸಿ. ರೋಡ್ ನಲ್ಲಿ ಅಡಿಕೆ ಎಲೆಚುಕ್ಕಿ ರೋಗ ಮಾಹಿತಿ ಕಾರ್ಯಕ್ರಮ
ಬಂಟ್ವಾಳ :ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ಮತ್ತು ತೋಟಗಾರಿಕಾ ಇಲಾಖೆ ಜಂಟಿ ಆಶ್ರಯದಲ್ಲಿಅಡಿಕೆ ಕೃಷಿ ಎಲೆಚುಕ್ಕಿ ರೋಗ ಮಾಹಿತಿ ನಿಯಂತ್ರಣ ಕಾರ್ಯಾಗಾರವು ಬಿ. ಸಿ. ರೋಡ್ ನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಬಂಟ್ವಾಳ ಭೂಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ. ಕೇದಾರನಾಥ್ ಮಾತನಾಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗವನ್ನು ಆರಂಭದಲ್ಲಿ ಗಮನಿಸಿ ನಿಯಂತ್ರಣಕ್ಕೆ ತರಬೇಕು, ಗಂಭೀರ ಸ್ವರೂಪಕ್ಕೆ ಬಂದಾಗ ರೈತರಿಗೆ ದೊಡ್ಡಮಟ್ಟದಲ್ಲಿ ನಷ್ಟ ಸಂಭವಿಸುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಪಿಯೂಸ್ ಎಲ್ ರೊಡ್ರಿಗಸ್ ಅವರು ಮಾತನಾಡಿ,ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಇಲಾಖೆಯಿಂದ ಕೀಟನಾಶಕ ಸಿಂಪರಣೆ ಆಗಬೇಕು ಎಂದು ಸಲಹೆ ನೀಡಿದರು. ನೆರೆ ರಾಜ್ಯ ತಮಿಳುನಾಡಿನಿಂದ ಸೀಯಾಳ ಬರುತ್ತಿದೆ. ಅದರ ಬದಲು ಸ್ಥಳೀಯ ತೆಂಗು ಬೆಳೆಗಾರರ ತೋಟದ ಸೀಯಾಳ ಮಾರಾಟಕ್ಕೆ ವ್ಯವಸ್ಥೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್ ಪಂಜಿಕಲ್ಲು, ತೆಂಗು ಸೌಹಾರ್ಧ ಸಹಕಾರಿ ಅಧ್ಯಕ್ಷ ರಾಜ್ ಬಂಟ್ವಾಳ್, ಮಂಗಳೂರು ಕೆವಿಕೆ ವಿಜ್ಞಾನಿ ಡಾ. ಕೇದಾರನಾಥ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ, ಸಹಕಾರಿ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಸಪಲ್ಯ ಅಂತರ, ಉಪನ್ಯಾಸಕ ಜಯಾನಂದ ಪೆರಾಜೆ, ಸಿಇಒ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.
ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆ ಸವಲತ್ತುಗಳ ಬಗ್ಗೆ ಪ್ರದೀಪ್ ಡಿಸೋಜ ತಿಳಿಸಿದರು.
ಕೃಷ್ಣಪ್ಪ ಅಂತರ ಸ್ವಾಗತಿಸಿ , ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.