ಬುಡಾ ಪ್ರಾಧಿಕಾರದ ವಲಯ ನಿಯಮಾವಳಿ ತಿದ್ದುಪಡಿಗೆ ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧಾರ
ಬಂಟ್ವಾಳ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏಕ ನಿವೇಶನ ಅನುಮೋದನೆಯಲ್ಲಿರುವ ತೊಡಕನ್ನು ಸರಿಪಡಿಸಲು ಬುಡಾ ಪ್ರಾಧಿಕಾರದ ವಲಯ ನಿಯಮಾವಳಿ ತಿದ್ದುಪಡಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲು ಮಂಗಳವಾರ ನಡೆದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಮಾಸಿಕ ಸಭೆಯು ನಿರ್ಣಯಿಸಲಾಯಿತು

ನಗರ ಯೋಜನಾ ಪ್ರಾಧಿಕಾರ ಇದರ ಮಾಸಿಕ ಸಭೆಯು ಅಧ್ಯಕ್ಷರಾದ ಬೇಬಿ ಕುಂದರ್ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
ಪುರಸಭಾ ವ್ಯಾಪ್ತಿಯಲ್ಲಿರುವ ಕೆರೆ ಅಭಿವೃದ್ದಿ ಪಡಿಸುವ ದೆಸೆಯಲ್ಲಿ ಸಣ್ಣ ನೀರಾವರಿ ಇಲಾಖೆಯವರಿಗೆ ಮುಂದಿನ ಜವಾಬ್ದಾರಿ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ಜಮೀನುಅತಿಕ್ರಮಣಗೊಳಿಸಿರುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.
ಬುಡಾ ಸದಸ್ಯರಾದ ಮನೋಹರ್ ಕುಲಾಲ್, ಅಬ್ದುಲ್ ರಜಾಕ್, ಹರೀಶ್ ಅಜ್ಜಿಬೆಟ್ಟು, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬುಡಾ ಕಾರ್ಯದರ್ಶಿ ಎಂ. ಪಿ.ಅಭಿಲಾಷ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.