ಬಂಟ್ವಾಳ ಜೈನ್‌ಮಿಲನ್ ವತಿಯಿಂದ” ಆಟಿಡೊರ ತಮ್ಮನದ ಲೇಸ್”
ಬಂಟ್ವಾಳ: ಭಾರತೀಯ ಜೈನ್‌ಮಿಲನ್, ಬಂಟ್ವಾಳ ಘಟಕದ ಮಾಸಿಕ ಸಭೆ ಹಾಗೂ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮವು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.ವಿಶೇಷ ಆಹ್ವಾನಿತರಾಗಿದ್ದ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಬಂಟ್ ಜೈನ್ ಮಿಲನ್ ಅಧ್ಯಕ್ಷ ಮಧ್ವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಜೈನ್‌ಮಿಲನ್ ವಲಯ 8 ರ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್,ಉಪಾಧ್ಯಕ್ಷರಾದ ಸುದರ್ಶನ್ ಜೈನ್,ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿಸುಭಾಶ್ಚಂದ್ರ ಜೈನ್ ,ಜೈನ್ ಮಿಲನ್ ಮಂಗಳೂರು ವಿಭಾಗ ನಿರ್ದೇಶಕರಾದ ಪ್ರಮೋದ್ ಕುಮಾರ್ ಬಜಿರೆ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇವೇಳೆ ಅಶೋಕ್ ಜೈನ್ ಸಂಗಬೆಟ್ಟು ಅವರಿಗೆ “ಮಿಲನೋತ್ತಮ” ಪ್ರಶಸ್ತಿ ಪ್ರಧಾನ ಮಾಡಲಾಯಿತಲ್ಲದೆ ಯುವರಾಜ್ ಜೈನ್ವಿದ್ಯಾರ್ಥಿ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.

ಅದೇರೀತಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಂಗಳೂರು ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಜೈನ್ ಮಿಲನ್ ಬಂಟ್ವಾಳ ಘಟಕದ ಕಾರ್ಯದರ್ಶಿಭರತ್ ಕುಮಾರ್ ಜೈನ್,ಕೋಶಾಧಿಕಾರಿ ಗೀತಾ ಜಿನಚಂದ್ರ ಮೊದಲಾದವರು ವೇದಿಕೆಯಲ್ಲಿದ್ದರು.
ಇದೇವೇಳೆ ಆಟಿಡೊರ ತಮ್ಮನದ ಲೇಸ್ ಪ್ರಯುಕ್ತ ಜೈನ್ ಮಿಲನ್ ಸದಸ್ಯರು ತಮ್ಮ, ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಜೈನ ಪಾರಂಪರಿಕ ತಿಂಡಿ ತಿನಿಸುಗಳನ್ನು ಪ್ರದರ್ಶಿಸಿದರಲ್ಲದೆ ಇದರ ಸವಿಯನ್ನು ಸವಿದರು.