ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಬಂಟ್ವಾಳ  ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ ಆಯೋಜಿಸಲಾಯಿತು.


ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮಿಯಾಪಾದೆ ಸೌಮ್ಯ ರವರ  ಮಲ್ಲಿಗೆ ನಾಟಿ,ಬೊಳ್ಳುರು  ಸತೀಶ್  ರವರ ಹೈನುಗಾರಿಕೆ  ಹಾಗೂ ಓಲೆ ಬೆಲ್ಲ ತಯಾರಿ, ವಾಸು ನಾಯ್ಕರವರ  ತಿಂಡಿ ಘಟಕ,  ಅಲ್ಲಿಪಾದೆ ರಘು ಪೂಜಾರಿಯವರ ಜನನಿ  ಪ್ರೊಡಕ್ಟ್, ನಾವುರ ಜಾಲಜಾಕ್ಷಿ ಯವರ ಬ್ಯಾಗ್ ತಯಾರಿ,  ನಾವುರ ಹೇಮಲತಾ ರವರ ರೊಟ್ಟಿ ತಯಾರಿ ಘಟಕಕ್ಕೆ ಭೇಟಿ ಮಾಡಿ ಸ್ವ ಉದ್ಯೋಗದ ಬಗ್ಗೆ  ಮಾಹಿತಿ ನೀಡಲಾಯಿತು. 

          
   ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಭೇಟಿ ಮಾಡಿ ಠಾಣಧಿಕಾರಿ ರಾಜೇಶ್  ಮತ್ತು ರೋಹಿತ್ ರವರು ಅಗ್ನಿ ಶಾಮಕದ ಬಗ್ಗೆ ಪ್ರಾತ್ಯಕ್ಷಿಕೆ  ಮೂಲಕ ಮಾಹಿತಿ ನೀಡಿದರು.ಬಂಟ್ವಾಳ ಮಹಿಳಾ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಲಾಗಿದ್ದು,ಇಲ್ಲಿನ ವಿದ್ಯಾರವರು ಮಹಿಳಾ  ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ಮಾಹಿತಿ ನೀಡಿದರು.


ಬಂಟ್ವಾಳ ನಗರ ಪೊಲೀಸ್ ಠಾಣೆಗೆ  ಇಲ್ಲಿ ಭೇಟಿಯಾಗಿ ಮಹಿಳಾ ಕಾನೂನಿನ ಬಗ್ಗೆ  ಹಾಗೂ ಠಾಣೆಯಲ್ಲಿ ಮಹಿಳೆಯರು ತಮಗೆ ಆಗುವ ಸಮಸ್ಯೆಯ ಬಗ್ಗೆ ದೂರು ಕೊಡುವ,   ಸಾಮಾಜಿಕ ಜಾಲತಾಣದಿಂದಾಗುವ ಸಮಸ್ಯೆ ಬಗ್ಗೆ ಮಹಿಳಾ ಪೊಲೀಸ್ ಅಧಿಕಾರಿ  ಧನ್ಯರವರು ಮಾಹಿತಿ ನೀಡಿದರು.


  ಈ ಸಂಧರ್ಭ ವಿಜಯ, ವಸಂತಿಯವರು ಸಹಕಾರ ನೀಡಿದರು..ಜನಜಾಗೃತಿ ಸದಸ್ಯರು, ಕೇಂದ್ರ ಒಕ್ಕೂಟ ಮಾಜಿ ಅಧ್ಯಕ್ಷರಾದ ಸದಾನಂದಗೌಡ ನಾವೂರು, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಧಿಕಾರಿ  ಶ್ರುತಿ,  ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *