ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದ ಶಾಸಕರು
ಪೊಳಲಿ: ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಜು.೨೦ರಂದು ಶನಿವಾರ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು.
ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ದೇವಳದ ಅರ್ಚಕ ಅನಂತ ಭಟ್ ಚೆಂಡಿನ ಗದ್ದೆಗೆ ಪ್ರಸಾದ ಹಾಕಿದ ನಂತರ ಸುಮಾರು ೨.೫೦ ಎಕರೆ ಗದ್ದೆಯಲ್ಲಿ ೩ ನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ನಾÊಕ್ , ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಬಾರಿ ಮಾಡಿದ ಕೃಷಿಯ ಮೂಲಕ ೯೫ ಸಾವಿರದಷ್ಟು ದೇವಸ್ಥಾನಕ್ಕೆ ಉಳಿತಾಯವಾಗಿದ್ದು, ಇದರ ಹುಲ್ಲು ಸ್ಥಳೀಯ ಅನೇಕ ಕೃಷಿಕರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು. ಭತ್ತದ ಕೃಷಿಯಿಂದ ಹೆಕ್ಟೇರ್‌ಗೆ ೮೦ ಸಾವಿರ ರೂ ಲಾಭ ಗಳಿಸುವುದು ನಿಜಕ್ಕೂ ಉತ್ತಮ ಆದಾಯ ಎಂದು ಹೇಳಿದ ಅವರು ಭತ್ತದ ಕೃಷಿ ಲಾಭದಾಯಕ ಕೃಷಿ ಎಂಬುದನ್ನು ಸೂಚಿಸುತ್ತದೆ, ಇದರಿಂದ ಇನ್ನಷ್ಟು ಭತ್ತದ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಮಾತನಾಡಿ ನಿರಂತರವಾಗಿ ಕಳೆದ ಮೂರು ವರ್ಷದಿಂದ ಇಲ್ಲಿಯ ಶಾಸಕ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಲ್ಲಿ ಯಂತ್ರದ ಮೂಲಕ ನಾಟಿ ಕಾರ್ಯಕ್ರಮ ಮಾಡುತ್ತೇವೆ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಾಲಾಕಾಲೇಜುಗಳ ಮುಖೇನಾ ಹಡೀಲು ಬಿದ್ದ ಗದ್ದೆಗಳನ್ನು ಅಭಿಯಾನದ ಮುಖಾಂತರ ಭತ್ತದ ಕೃಷಿ ಮಾಡಲು ಬಿತ್ತನೆ ಬೀಜಗಳನ್ನು ನೀಡಿತ್ತೇವೆ.
ಈ ಭಾಗದಲ್ಲಿ ಕೆಂಪುಭತ್ತಕ್ಕೆ ಬೇಡಿಕೆ ,ಜಯ, ಕೆಂಪುಮುಕ್ತಿ, ಜ್ಯೋತಿ ಬೀಜಗಳನ್ನು ಬಿತ್ತನೆ ಮಾಡಲು ರೈತರಿಗೆ ಕೃಷಿ ಇಲಾಖೆ ನೀಡುತ್ತದೆ. ಬಂಟ್ವಾಳದಲ್ಲಿ ೧,೫೧೦ ಎಕರೆ ಭತ್ತದ ಕೃಷಿಇದ್ದು ರೈತರು ಸಂಪೂರ್ಣ ಕೃಷಿ ನಾಟಿಯನ್ನು ಮಾಡುತ್ತಾರೆ. ದಕ್ಷಿಣಕನ್ನಡದಲ್ಲಿ ೯,೩೦೦ ಎಕರೆ ಭತ್ತದ ಕೃಷಿ ಇದೆ ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ನೀಡುತ್ತಿದೆ ಎಂದರು.
ಇದೇ ಸಂದರ್ಭ ಪೂವಪ್ಪ ಪೂಜಾರಿ, ಸುಧಾಕರ ಸಪಲ್ಯ, ನಳಿನಾಕ್ಷಿ ಎಂಬವರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ ನೀಡಲಾಯಿತು.
ಉಪನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಅಮ್ಟಾಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ವೆಂಕಟೇಶ ನಾವಡ ಪೊಳಲಿ , ಪ್ರಮುಖರಾದ ಯಶವಂತ ಪೊಳಲಿ, ಸುಕೇಶ್ ಚೌಟ,ಚಂದ್ರಶೇಖರ್ ಶೆಟ್ಟಿ, ಮಹಿಳಾ ಮೋರ್ಚಾಕಾರ್ಯದರ್ಶಿ ಚಂದ್ರಾವತಿ ಪೊಳಲಿ, ರೈತ ಮೋರ್ಚಾಸದಸ್ಯ ಯಶೋಧರ ಕಲ್ಕುಟ್ಟ, ಯುವ ಮೋರ್ಚಾ ಉಪಾದ್ಯಕ್ಷ ಕಾರ್ತಿಕ್ ಬಲ್ಲಾಳ್, ಲೋಕೇಶ್ ಭರಣಿ, ನವೀನ ಕಟ್ಟಪುಣಿ, ಸೇಸಪ್ಪ ದೇವಾಡಿಗ, ನಾರಾಯಣ ಕಟ್ಟಪುಣಿ ಮತ್ತಿತರರು ಇದ್ದರು.