ಅರಳ: ದರ್ಬೇ ಶ್ರೀ ಗರುಡಮಹಾಕಾಳಿ ದೇವಳ ಜೀರ್ಣೊದ್ಧಾರಕ್ಕೆ ಚಾಲನೆ, ಬಾಲಾಲಯ ಪ್ರತಿಷ್ಠೆ
ಬಂಟ್ವಾಳ:ಇಲ್ಲಿನ ಅರಳ ಗ್ರಾಮದಲ್ಲಿ ಸುಮಾರು 1500 ವರ್ಷಗಳ ಹಿನ್ನೆಲೆ ಹೊಂದಿರುವ ದರ್ಭ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಪುನರ್ ನಿರ್ಮಾಣಗೊಳ್ಳಲಿದ್ದು, ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಶ್ರೀ ಗರುಡಮಹಾಕಾಳಿ ದೇವರು ಸಹಿತ ಶ್ರೀ ಮಹಾಗಣಪತಿ ಮತ್ತು ಗರುಡನ ವಿಗ್ರಹಗಳನ್ನು ಭಾನುವಾರ ಬಾಲಾಲಯದಲ್ಲಿ ಪ್ರತಿಷ್ಠೆಗೊಳಿಸಲಾಯಿತು.

ಇದೇ ವೇಳೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಳದ ಜೀರ್ನೋದ್ಧಾರ ಕಾರ್ಯಕ್ಕೆ ಭಕ್ತರು ಶ್ರಮದಾನದ ಮೂಲಕ ಚಾಲನೆ ನೀಡಿದರು.ಜೈನ ಮನೆತನದ ಆಡಳಿತದಲ್ಲಿ ಪೂಜಿಸಲಾಗುತ್ತಿದ್ದ ದೇವಾಲಯವು ಸಂಪೂರ್ಣ ಜೀರ್ಣವಸ್ಥೆಯಲ್ಲಿ ಇತ್ತು. ಇಲ್ಲಿ ಪುರಾತನ ಪಂಚಲೋಹದ ಗರುಡಮಹಾಕಾಳಿ ದೇವರ ವಿಗ್ರಹ ಸಹಿತ ಶ್ರೀ ಮಹಾಗಣಪತಿ ಮತ್ತು ಗರುಡನ ದಾರುಶಿಲ್ಪದ ವಿಗ್ರಹ ಪತ್ತೆಯಾಗಿದೆ.
ಈಗಾಗಲೇ ಜೀರ್ನೋದ್ಧಾರ ಸಮಿತಿ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಭಕ್ತರ ನೆರವಿನಲ್ಲಿ ದೇವಸ್ಥಾನ ಪುನರ್ ನಿರ್ಮಾಣಗೊಳ್ಳಲಿದೆ ಎಂದು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ತಿಳಿಸಿದರು.
ಪ್ರಮುಖರಾದ ಅಗ್ಗೊಂಡೆಗುತ್ತು ಅಜಿತ್ ಕುಮಾರ್ ಶೆಟ್ಟಿ, ರತ್ನಾಕರ ಶೆಟ್ಟಿ, ಜಗಧೀಶ ಆಳ್ವ ಅಗ್ಗೊಂಡೆ, ಬಾಬು ಶೇಖ, ಲಕ್ಷ್ಮೀಧರ ಶೆಟ್ಟಿ, ಡೊಂಬಯ ಅರಳ, ರಂಜನ್ ಕುಮಾರ್ ಶೆಟ್ಟಿ, ರವಿ ಅರಸ, ಸುಕುಮಾರ್ ಶೆಟ್ಟಿ, ಉಮೇಶ ಡಿ.ಎಂ., ಶಿವರಾಮ ಪೂಜಾರಿ, ಅರ್ಚಕ ಸುಬ್ರಾಯ ಭಟ್ ಮತ್ತಿತರರು ಇದ್ದರು.