ಇರ್ವತ್ತೂರು ಶ್ರೀ ಶಾರದೋತ್ಸವ ಸೇವಾ ಸಮಿತಿ ವನಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಇರ್ವತ್ತೂರು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮಂಗಳೂರು ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ , ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಮೂಡು ಪಡುಕೋಡಿ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.

“ಮನೆಗೊಂದು ಗಿಡ, ಊರಿಗೊಂದು ವನ”ಎಂಬ ಘೋಷಣೆಯೊಂದಿಗೆ ಶಾಲೆಯ ಪ್ರತೀ ವಿದ್ಯಾರ್ಥಿಗೆ ಗಿಡ ವಿತರಿಸುವ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ಅರಿವು ಎಳವೆಯಿಂದಲೇ ಉಂಟಾಗಬೇಕು. ಈ ನಿಟ್ಟಿನಲ್ಲಿ ಇಂತಹ ವನ ಮಹೋತ್ಸವ ಕಾರ್ಯಕ್ರಮ ನಡೆಸುವ ಗ್ರಾಮದ ಶಾರದೋತ್ಸವ ಸಮಿತಿ ಕಾರ್ಯ ಅಭಿನಂದನೀಯ ಎಂದರು.
ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಅವರು ಮಾತನಾಡಿ, ಪ್ರತೀ ವಿದ್ಯಾರ್ಥಿಗೆ ಗಿಡ ನೀಡಲಾಗುತ್ತಿದ್ದು, ಇದನ್ನು ತಮ್ಮ ಮನೆಯಲ್ಲಿ ನೆಟ್ಟು ಪಾಲನೆ, ಪೋಷಣೆ ಮಾಡಬೇಕು.ಮುಂದಿನ ವರ್ಷ ಉತ್ತಮವಾಗಿ ಬೆಳೆಸಿದ ಗಿಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುವುದು ಎಂದರು.
ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷೆ ಹರಿಣಾಕ್ಷಿ ನಾಗೇಶ್, ಮೂಡುಪಡುಕೋಡಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕಯ್ಯಬೆ, ಉಪಾಧ್ಯಕ್ಷೆ ಶಾಲಿನಿ, ಬಂಟ್ವಾಳ ಕ್ಷೇತ್ರಶಿಕ್ಷಣಾಽಕಾರಿ ಕಛೇರಿ ಶಿಕ್ಷಣ ಸಂಯೋಜಕಿ ಸುಜಾತಾ ಭಟ್, ಸಿಆರ್‌ಪಿ ಜ್ಯೋತಿ, ಮುಖ್ಯ ಶಿಕ್ಷಕಿ ಐರಿನ್ ಮಿರಾಂದ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಬಜೆ,ಕಾರ್ಯದರ್ಶಿ ಸುಪ್ರೀತ್ ಜೈನ್, ಇರ್ವತ್ತೂರು ಗ್ರಾ.ಪಂ. ಸದಸ್ಯರಾದ ದಯಾನಂದ ಎರ್ಮೆನಾಡ್, ಶುಭಕರ ಶೆಟ್ಟಿ ಮಠ,ಸುಽಂದ್ರ ಶೆಟ್ಟಿ , ಪ್ರಶಾಂತ್ ಜೈನ್,ವಿಜಯಾ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರಾದ ಲೋಕೇಶ್ ಎರ್ಮೆನಾಡು, ಹರೀಶ್ ಎರ್ಮೆನಾಡ್, ನವೀನ್ ಸೇವಾ, ವಿಜಯ,ಸೇಸಪ್ಪ ,ಶ್ರೀನಿವಾಸ , ಪ್ರಮುಖರಾದ ರಾಜೀವ ಶೆಟ್ಟಿ ಎಡ್ತೂರು, ಶಂಕರ್ ಶೆಟ್ಟಿ ಬೆದ್ರಮಾರ್,ಸತೀಶ್ ಕರ್ಕೇರ, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.