ಮೊಡಂಕಾಪು: ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ:ಇಲ್ಲಿನ ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷರಾಗಿ ನಿವೃತ್ತ ಸೇನಾನಿ ಅಲೆಕ್ಸಾಂಡರ್ ಲೋಬೊ ಮತ್ತು ಕಾರ್ಯದರ್ಶಿಯಾಗಿ ಪ್ರೀಮಾಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.
ಇದೇ 13ರಂದು ಸಂಜೆ 6.45 ಗಂಟೆಗೆ ಬಿ.ಸಿ.ರೋಡು ಕೈಕಂಬ ಸೂರ್ಯವಂಶ ಸಭಾಂಗಣದಲ್ಲಿ ಪದಗ್ರಹಣ ನಡೆಯಲಿದ್ದು, ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ, ಸಹಾಯಕ ಗವರ್ನರ್ ಮೊಹಮ್ಮದ್ ವಳವೂರು, ಪ್ರಮುಖರಾದ ಸೂರ್ಯನಾರಾಯಣ ಪಿ. ಪ್ರೊ.ಗೋವರ್ಧನ್ ರಾವ್, ಸಂಜೀವ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.